Mysore
15
clear sky

Social Media

ಶುಕ್ರವಾರ, 23 ಜನವರಿ 2026
Light
Dark

Bihar Result : ಭರ್ಜರಿ ಗೆಲುವಿನತ್ತ 25ರ ಹರೆಯದ ಗಾಯಕಿ ಮೈಥಿಲಿ ಠಾಕೂರ್‌

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಲಿನಗರ ಕ್ಷೇತ್ರದಿಂದ ರಾಜಕೀಯ ಕಣಕ್ಕೆ ಧುಮುಕಿರುವ 25ರ ಹರೆಯದ ಗಾಯಕಿ ಮೈಥಿಲಿ ಠಾಕೂರ್‌ ಗೆಲುವಿನತ್ತ ದಾಪುಗಾಲು ಹೆಜ್ಜೆ ಇಟ್ಟಿದ್ದಾರೆ.

ರಾಜಕೀಯ ಪ್ರವೇಶಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದ ಗಾಯಕಿ ಬಿಹಾರ ಚುನಾವಣೆಗೆ ಸ್ಟಾರ್‌ ಅಟ್ರಾಕ್ಷನ್‌ ತಂದಿದ್ದರು. ಅಲಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರು ಆರ್‌ಜೆಡಿಯ ಬಿನೋದ್‌ ಮಿಶ್ರಾ ಮತ್ತು ಜನ್‌ ಸುರಾಜ್‌ ಪಕ್ಷದ ಅಭ್ಯರ್ಥಿ ಬಿಪ್ಲಾವ್‌ ಕುಮಾರ್‌ ಚೌಧರಿ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ರಾಕೂರ್‌ 28,104 ಮತ ಮುನ್ನೆಡೆ ಇದ್ದರೆ, ಆರ್‌ಜೆಡಿಯ ಮಿಶ್ರಾ 21,311 ಮತ ಹಾಗೂ ಜನ್‌ ಸುರಾಜ್‌ ಪಕ್ಷದ ಬಿಪ್ಲಾವ್‌ ಕೇವಲ 859 ಮತಗಳೊಂದಿಗೆ ಹಿಂದುಳಿದಿದ್ದಾರೆ.

ಆರಂಭಿಕ ಟ್ರೆಂಡ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಮೈಥಿಲಿ ಠಾಕೂರ್, “ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ಫಲಿತಾಂಶದ ಬಗ್ಗೆ ನನಗೆ ಅನುಮಾನ ಇರಲಿಲ್ಲ. ಜನರು ನನಗೆ ಮತ್ತು ನನ್ನ ಪಕ್ಷಕ್ಕೆ ತೋರಿಸಿದ ಪ್ರೀತಿಯಿಂದ ಹೃದಯ ತುಂಬಿ ಬಂದಿದೆ. ಮುಂಬರುವ ಐದು ವರ್ಷಗಳಲ್ಲಿ ನಾನು ಜನರ ಪರವಾಗಿ ಇರುತ್ತೇನೆ. ನಾನು ಈ ಮಣ್ಣಿನ ಮಗಳು. ಮತದಾರರನ್ನು ಕೇವಲ ಮತದಾರರಾಗಿ ನೋಡಲಿಲ್ಲ, ಕುಟುಂಬವಾಗಿ ನೋಡಿದೆ, ಜನರು ಅದೇ ರೀತಿ ಪ್ರತಿಕ್ರಿಯಿಸಿದ್ದಾರೆ. ನನಗೆ ಕೇವಲ 25 ವರ್ಷ, ಆದರೆ ಮುಂದಿನ ದಿನಗಳಲ್ಲಿ ನಾನು ನನ್ನನ್ನು ಸಾಬೀತುಪಡಿಸುತ್ತೇನೆ” ಎಂದರು.

Tags:
error: Content is protected !!