Mysore
21
overcast clouds
Light
Dark

ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

ಪಾಟ್ನಾ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್‌ ಮೋದಿ ಅವರು ಸೋಮವಾರ ನಿಧನ ಹೊಂದಿದ್ದಾರೆ.

ರಾಜ್ಯಸಭಾ ಸದಸ್ಯರಾಗಿದ್ದ 72 ವರ್ಷದ ಸುಶೀಲ್ ಕುಮಾರ್‌ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದೇ ಕಾರಣದಿಂದಾಗಿಯೇ ಈ ಬಾರಿಯ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.

ಸುಶೀಲ್ ಕುಮಾರ್‌ ಮೋದಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದು, ಸುನೀಲ್‌ ಜೀ ನಿಮ್ಮ ಅಗಲಿಗೆ ತುಂಬಲಾರದ ನಷ್ಟವಾಗಿದೆ. ದಶಕಗಳ ಕಾಲ ಗೆಳೆಯರಾಗಿ, ಪಕ್ಷದ ಸಹಪಾಠಿಯಾಗಿ ನಿಮ್ಮೊಂದಿಗೆ ಉತ್ತಮ ದಿನಗಳನ್ನು ಕಳೆದಿದ್ದೇವೆ. ಬಿಹಾರದಲ್ಲಿ ಬಿಜೆಪಿ ತಲೆಯೆತ್ತಲು ನಿಮ್ಮ ಪಾತ್ರ ಬಹಳ ಪ್ರಮುಖವಾದದ್ದು. ಜಿಎಸ್‌ಟಿ ಜಾರಿಯಲ್ಲಿ ಅವರ ಸಕ್ರೀಯ ಪಾತ್ರ ಅತೀ ಪ್ರಮುಖವಾದದ್ದು ಅದನ್ನು ಮರೆಯಲು ಸಾಧ್ಯವಿಲ್ಲ. ನಿಮ್ಮ ಕುಟುಂಬ ಮತ್ತು ಅಪಾರ ಬೆಂಬಲಿಗರಿಗೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಸುತ್ತೇವೆ ಎಂದು ಬರೆದುಕೊಂಡಿದ್ದಾರೆ.