Mysore
22
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ರಂಗೇರಿದ ಬಿಹಾರ ವಿಧಾನಸಭಾ ಕಣ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, 71 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.

ಬಿಹಾರದ 71 ಕ್ಷೇತ್ರಗಳಿಗೆ ಬಿಜೆಪಿ ಮೊದಲ ಪಟ್ಟಿ ಪ್ರಕಟಿಸಿದ್ದು, ಅವುಗಳಲ್ಲಿ 9 ಕ್ಷೇತ್ರಗಳಿಗೆ ಮಹಿಳೆಯರಿಗೆ ಟಿಕೆಟ್‌ ನೀಡಲಾಗಿದೆ. ತಾರಾಪುರ ಕ್ಷೇತ್ರದಿಂದ ಡಿಸಿಎಂ ಸಾಮ್ರಾಟ್‌ ಚೌಧರಿಗೆ ಟಿಕೆಟ್‌ ನೀಡಲಾಗಿದ್ದು, ಸ್ಪೀಕರ್‌ ನಂದಕುಮಾರ್‌ ಯಾದವ್‌ಗೆ ಟಿಕೆಟ್‌ ಕೈತಪ್ಪಿದೆ.

ಇದನ್ನೂ ಓದಿ:-ಅಕ್ಟೋಬರ್.‌16ರಂದು ಬಳ್ಳಾರಿಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಆಗಮನ

ತಲಾ 101 ಕ್ಷೇತ್ರಗಳನ್ನು ಜೆಡಿಯು ಹಾಗೂ ಬಿಜೆಪಿ ಹಂಚಿಕೆ ಮಾಡಿಕೊಂಡಿದೆ. ಲೋಕ ಜನಶಕ್ತಿ ಪಕ್ಷಕ್ಕೆ 29 ಕ್ಷೇತ್ರ, ಜೀತನ್‌ ರಾವ್‌ ಮಾಂಝಿ ಅವರ ಎಚ್‌ಎಎಂ ಪಕ್ಷಕ್ಕೆ 6 ಕ್ಷೇತ್ರಗಳು, ಉಪೇಂದ್ರ ಕುಶ್ವಾಹ ರಾಷ್ಟ್ರೀಯ ಲೋಕ ಮೋರ್ಚಾಗೆ 6 ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ.

ಬಿಹಾರ ವಿಧಾನಸಭಾ ಚುನಾವಣೆಯು ನವೆಂಬರ್.‌6 ಹಾಗೂ 11 ರಂದು ನಡೆಯಲಿದ್ದು, ನವೆಂಬರ್.‌14ರಂದು ಫಲಿತಾಂಶ ಹೊರಬೀಳಲಿದೆ.

Tags:
error: Content is protected !!