ಪಾಟ್ನಾ: ಬಿಹಾರದಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ನಡೆಯುತ್ತಿದ್ದು, ಇಂದು 18 ಜಿಲ್ಲೆಗಳ 121 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದು, ಬೆಳಿಗ್ಗೆ ಏಳು ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಸಂಜೆ ಆರು ಗಂಟೆವರೆಗೆ ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಲಿದೆ.
ಇದನ್ನು ಓದಿ: ʼಬಿಹಾರʼ ಗೆದ್ದರೆ ಎಲ್ಲಾ ʼಹುದ್ದೆʼ ಗೆದ್ದಂತೆ : ಡಿಸಿಎಂ ಡಿ.ಕೆ ಶಿವಕುಮಾರ್
45,324 ಬೂತ್‌ಗಳಲ್ಲಿ ಮತದಾನ ನಡೆಯುತ್ತಿದ್ದು, ಎಲ್ಲವನ್ನು ನೈಜ ಸಮಯದ ಮೇಲ್ವಿಚಾರಣೆಯಗಾಗಿ 100 ಪ್ರತಿಶತ ವೆಬ್‌ಕಾಸ್ಟ್ ಮಾಡಲಾಗುತ್ತಿದೆ.
ಎಲ್ಲಾ ಮತಗಟ್ಟೆಗಳಲ್ಲೂ ಬಿಗಿ ಭದ್ರತೆ ಒದಗಿಸಲಾಗಿದ್ದು, ಮಹಿಳಾ ಮತದಾರರಿಗೆ ಅಗತ್ಯ ಸೇವೆಗಳನ್ನು ಒದಗಿಸಲು 320 ಮಾದರಿ ಬೂತ್‌ಗಳನ್ನು ಸಹ ರಚನೆ ಮಾಡಲಾಗಿದೆ.
ಇಂದು ಮತದಾನ ನಡೆಯಲಿರುವ ಪ್ರಮುಖ ಜಿಲ್ಲೆಗಳಲ್ಲಿ ಪಾಟ್ನಾ, ವೈಶಾಲಿ, ನಳಂದ, ಭೋಜ್‌ಪುರ, ಮುಂಗೇರ್, ಸರನ್, ಸಿವಾನ್, ಗೋಪಾಲ್‌ಗಂಜ್ ಮತ್ತು ಮುಜಫರ್‌ಪುರ ಸೇರಿವೆ.





