Mysore
20
scattered clouds

Social Media

ಬುಧವಾರ, 11 ಮಾರ್ಚ್ 2026
Light
Dark

ಗಡಿಯಲ್ಲಿ ಭಾರತ-ಚೀನಾ ಯೋಧರ ಹಿಂತೆಗೆತ ಪ್ರಕ್ರಿಯೆ ಪೂರ್ಣ

ನವದೆಹಲಿ: ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ-ಚೀನಾ ಯೋಧರ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಳೆ ಸಿಹಿ ಹಂಚಿ ಸಂಭ್ರಮಿಸಲಾಗುತ್ತದೆ.

ಸೇವಾ ವಾಪಸಾತಿಯ ನಂತರ ಎರಡೂ ಕಡೆಯವರು ಶೀಘ್ರದಲ್ಲೇ ತಮ್ಮ ತಮ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆಯನ್ನು ಪ್ರಾರಂಭ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಳೆ ಎರಡೂ ಕಡೆಯ ಸೇನೆಗಳು ಸಿಹಿ ವಿನಿಮಯ ಮಾಡಿಕೊಳ್ಳಲಿದ್ದು, ಎಲ್ಲೆಡೆ ಸಂತಸ ಮನೆಮಾಡಿದೆ.

ಈ ದೀರ್ಘಾವಧಿಯ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತ ಹೆಚ್ಚು ಹೆಚ್ಚು ಪರಿಣಾಮಕಾರಿ ಕೆಲಸ ಮಾಡಿದೆ.

ಇದೇ ಅಕ್ಟೋಬರ್.‌21ರಂದು ಪೂರ್ವ ಲಡಾಖ್‌ನಲ್ಲಿರುವ ನೈಜ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗಲು ಭಾರತವು ಚೀನಾದೊಂದಿಗೆ ಒಪ್ಪಂದ ಘೋಷಿಸಿತ್ತು. ಈ ಮೂಲಕ ನಾಲ್ಕು ವರ್ಷಗಳ ಮಿಲಿಟರಿ ಬಿಕ್ಕಟ್ಟನ್ನು ಕೊನೆಗೊಳಿಸಿತು.

 

Tags:
error: Content is protected !!