Mysore
22
light rain

Social Media

ಭಾನುವಾರ, 02 ಆಗಸ್ಟ್ 2026
Light
Dark

ಇಸ್ರೋಗೆ ಮತ್ತೊಂದು ಮೈಲಿಗಲ್ಲು: ನಭಕ್ಕೆ ಹಾರಿದ ಪಿಎಸ್‌ಎಲ್‌ವಿ ರಾಕೆಟ್‌

ಶ್ರೀಹರಿಕೋಟಾ: ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಪಿಎಸ್‌ಎಲ್‌ವಿ-C62 ರಾಕೆಟ್‌ ಮೂಲಕ EOS-N1 ಅನ್ವೇಷಾ ಸೇರಿದಂತೆ 16 ಉಪಗ್ರಹಗಳನ್ನು ಉಡಾವಣೆ ಮಾಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-C6 ರಾಕೆಟ್‌ ಮೂಲಕ EOS-N1 ಅನ್ವೇಷಾ ಉಪಗ್ರಹ ಸೇರಿದಂತೆ 16 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಡಿಆರ್‌ಡಿಓ ಅಭಿವೃದ್ಧಿಪಡಿಸಿದ ಈ ಹೈಪರ್‌ಸ್ಟೆಕ್ಟ್ರಲ್‌ ಭೂ-ವೀಕ್ಷಣಾ ಉಪಗ್ರಹವು ಕಣ್ಗಾವಲು ಮತ್ತು ರಕ್ಷಣಾ ಉದ್ದೇಶಗಳಿಗೆ ಅತ್ಯಂತ ಪ್ರಮುಖವಾಗಿದೆ. ಸಾಮಾನ್ಯ ಉಪಗ್ರಹಗಳಿಂದ ಭಿನ್ನವಾಗಿರುವ ಅನ್ವೇಷಾ, ವಸ್ತುಗಳ ಬಣ್ಣ ಮಾತ್ರವಲ್ಲದೇ ಅವುಗಳ ಸ್ಟೆಕ್ಟ್ರಲ್‌ ಸಿಗ್ನೇಚರ್‌ ಅನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ರಕ್ಷಣೆಯ ಹೊರತಾಗಿ ಕೃಷಿ, ಮಣ್ಣಿನ ತೇವಾಂಶ, ಮಾಲಿನ್ಯ ಮೇಲ್ವಿಚಾರಣೆ ಹಾಗೂ ಖನಿಜ ಸಂಪನ್ಮೂಲವನ್ನು ಗುರುತಿಸುವಲ್ಲಿಯೂ ಈ ಉಪಗ್ರಹ ಬಳಕೆಯಾಗಲಿದೆ.

ಈ ಮೂಲಕ ಇಸ್ರೋ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದ್ದು, ಭೂವೀಕ್ಷಣಾ ಉಪಗ್ರಹಗಳನ್ನು ನಭಕ್ಕೆ ಹಾರಿಸಿದೆ.

Tags:
error: Content is protected !!