Mysore
30
few clouds

Social Media

ಮಂಗಳವಾರ, 27 ಜನವರಿ 2026
Light
Dark

ಆಂಧ್ರಪ್ರದೇಶದಲ್ಲಿ ಮತ್ತೆ ಎನ್‌ಕೌಂಟರ್:‌ ಮತ್ತೆ 7 ನಕ್ಸಲರ ಹತ್ಯೆ

ಆಂಧ್ರಪ್ರದೇಶ: ಇಲ್ಲಿನ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮಾರೆಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಗುಂಡಿನ ಚಕಮಕಿ ನಡೆದಿದ್ದು, ಏಳು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಮಾತನಾಡಿದ ಎಪಿ ಗುಪ್ತಚರ ಎಡಿಜಿ ಮಹೇಶ್‌ ಚಂದ್ರ ಲಡ್ಡಾ ಅವರು, ಹೊಸ ಎನ್‌ಕೌಂಟರ್‌ ಮಂಗಳವಾರದ ಕಾರ್ಯಾಚರಣೆಯ ಮುಂದುವರಿಕೆಯಾಗಿದೆ ಎಂದು ಹೇಳಿದರು.

ಕ್ಷೇತ್ರದಿಂದ ಬಂದ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಏಳು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಕೊಲ್ಲಲ್ಪಟ್ಟವರಲ್ಲಿ ಮೂವರು ಮಹಿಳಾ ಮಾವೋವಾದಿಗಳು ಸೇರಿದ್ದಾರೆ ಎಂದು ಹೇಳಿದರು.

ಇನ್ನು ಗುರುತಿನ ಪರಿಶೀಲನೆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಆದಾಗ್ಯೂ ಮೃತರಲ್ಲಿ ಒಬ್ಬನನ್ನು ಶ್ರೀಕಾಕುಳಂ ಮೂಲದ ಮೇತುರಿ ಜೋಖಾ ರಾವ್‌ ಅಲಿಯಾಸ್‌ ಟೆಕ್‌ ಶಂಕರ್‌ ಎಂದು ಗುರುತಿಸಲಾಗಿದೆ.

ಕಾಕಿನಾಡ, ಕೊನಸೀಮಾ ಮತ್ತು ಎಲೂರು ಜಿಲ್ಲೆಗಳಲ್ಲಿ 50 ಮಾವೋವಾದಿಗಳನ್ನು ಬಂಧಿಸಲಾಗಿದೆ. ಇದು ಆಂಧ್ರಪ್ರದೇಶದ ಇತಿಹಾಸದಲ್ಲಿ ಇಂತಹ ಅತಿದೊಡ್ಡ ಬಂಧನವಾಗಿದೆ ಎಂದು ಅಧಿಕಾರಿ ಹೇಳಿದರು.

Tags:
error: Content is protected !!