Mysore
15
clear sky

Social Media

ಬುಧವಾರ, 24 ಡಿಸೆಂಬರ್ 2025
Light
Dark

ಚೀನಾದ ಬೇಹುಗಾರಿಕಾ ಬಲೂನ್ ಹೊಡೆದುರುಳಿಸಿದ ಅಮೆರಿಕ

ವಾಷಿಂಗ್ಟನ್: ದಕ್ಷಿಣ ಕೆರೊಲಿನಾದ ಕರಾವಳಿುಂಲ್ಲಿ ಕಾಣಿಸಿಕೊಂಡಿದ್ದ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕದ ಫೈಟರ್ ಜೆಟ್ ಶನಿವಾರ ಹೊಡೆದುರುಳಿಸಿದೆ ಎಂದು ಪೆಂಟಗನ್ (ಅಮೆರಿಕ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ) ತಿಳಿಸಿದೆ.
ಇದು ಚೀನಾದಿಂದ ಆಗಿರುವ ಅಮೆರಿಕ ಸಾರ್ವಭೌಮತೆಯ ಉಲ್ಲಂಘನೆ ಎಂದು ಪೆಂಟಗನ್ ಹೇಳಿದೆ. ಅಮೆರಿಕ ವಾಯು, ಜಲಪ್ರದೇಶದಲ್ಲಿ ಹಾರಾಡುತ್ತಿದ್ದ ಬಲೂನ್ ಅನ್ನು ಹೊಡೆದುಹಾಕಿದ ಯುದ್ಧ ವಿಮಾನದ ಪೈಲಟ್‌ಗಳನ್ನು ದೇಶದ ಅಧ್ಯಕ್ಷ ಜೋ ಬೈಡನ್ ಅವರು ಅಭಿನಂದಿಸಿದರು.
ಫೈಟರ್ ಜೆಟ್‌ಗಳು ಬಲೂನ್ ಅನ್ನು ಯಶಸ್ವಿಯಾಗಿ ಹೊಡೆದುಹಾಕಿವೆ. ನಮ್ಮ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದು ಬೈಡನ್ ಅವರು ಮೇರಿಲ್ಯಾಂಡ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಈ ಕಾರ್ಯಾಚರಣೆಗಾಗಿ ದೇಶದ ಆಗ್ನೇಯ ಭಾಗದ 3 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾರ್ಯಾಚರಣೆ ಎಂದು ದೇಶದ ವಾಯುಯಾನ ಇಲಾಖೆ ಹೇಳಿತ್ತು. ಸದ್ಯ ಹೊಡೆದುರುಳಿಸಲಾಗಿರುವ ಬಲೂಲ್ ಮತ್ತು ಅದರೊಳಗಿನ ಸಾಧನಗಳನ್ನು ಪತ್ತೆ ಮಾಡಲು ಕಾರ್ಯಾಚರಣೆ ಆರಂಭವಾಗಿದೆ ಎಂದು ಪೆಂಟಗನ್ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!