ಶ್ರೀನಗರ: ಪ್ರಸಿದ್ಧ ಯಾತ್ರಾಸ್ಥಳ ಅಮರನಾಥ ಯಾತ್ರೆಗೆ ಜಮ್ಮು-ಕಾಶ್ಮೀರ ಸರ್ಕಾರ ಬಿಗಿ ಭದ್ರತೆಗಳನ್ನು ಕಲ್ಪಿಸಿದೆ.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಮರನಾಥ ಯಾತ್ರಾ ಮಾರ್ಗಗಳು ಹಾರಾಟ ನಿಷೇಧ ವಲಯ ಎಂದು ಘೋಷಣೆ ಮಾಡಿದೆ.
ಯಾತ್ರೆಗೆ ತೆರಳಲು ಎರಡು ಮಾರ್ಗಗಳಿದ್ದು, ಒಂದು ಪಹಲ್ಗಾಮ್ ಮಾರ್ಗ. ಮತ್ತೊಂದು ಬಾಲ್ಟಾಲ್ ಮಾರ್ಗ. ಈಗ ಎರಡೂ ಮಾರ್ಗಗಳಲ್ಲೂ ಹಾರಾಟ ನಿಷೇಧ ವಲಯ ಎಂದು ಘೋಷಣೆ ಮಾಡಲಾಗಿದೆ.
ಈ ಎರಡೂ ಮಾರ್ಗಗಳಲ್ಲೂ ಮಾನವರಹಿತ ವೈಮಾನಿಕ ವಾಹನ, ಡ್ರೋನ್‌ಗಳು, ಬಲೂನ್‌ಗಳು ಸೇರಿದಂತೆ ಯಾವುದೇ ರೀತಿಯ ವಾಯುಯಾನ ಸಾಧನಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ.
ಇನ್ನು ಈ ಆದೇಶ ಜುಲೈ.1ರಿಂದ ಆಗಸ್ಟ್.10ರವರೆಗೂ ಇರಲಿದೆ ಎಂದು ಜಮ್ಮು-ಕಾಶ್ಮೀರ ಗೃಹ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.





