ಅಹಮದಾಬಾದ್: ಗುಜರಾತ್ ಎಟಿಎಸ್ ಪ್ರಮುಖ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದ್ದು, ಶಸ್ತ್ರಾಸ್ತ್ರ ವಿನಿಮಯದ ಸಮಯದಲ್ಲಿ ಮೂವರು ಶಂಕಿತರನ್ನು ಬಂಧಿಸಲಾಗಿದೆ.
ಭಯೋತ್ಪಾದಕ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದಾಬಾದ್‌ನ ಸುಂದೌಯ್‌ನಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮೂವರು ವ್ಯಕ್ತಿಗಳನ್ನು ಬಂಧಿಸಿದೆ.
ಆರೋಪಿಗಳು ಕಳೆದ ಒಂದು ವರ್ಷದಿಂದ ಕಣ್ಗಾವಲಿನಲ್ಲಿದ್ದರು. ಎಟಿಎಸ್ ಪ್ರಕಾರ, ಈ ಮೂವರು ಶಸ್ತ್ರಾಸ್ತ್ರಗಳನ್ನು ಪೂರೈಸುವಾಗ ಬಂಧಿಸಲ್ಪಟ್ಟವರು ಹಾಗೂ ದೇಶದ ವಿವಿಧ ಭಾಗಗಳಲ್ಲಿ ಭೈಯೋತ್ಪಾದಕ ದಾಳಿಗಳನ್ನು ನಡೆಸಲು ಯೋಜಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಬಂಧಿತ ಆರೋಪಿಗಳನ್ನು ಡಾ.ಅಹಮ್ಮದ್ ಮೊಹಿಯುದ್ದೀನ್ ಸೈಯದ್, ಮೊಹಮ್ಮದ್ ಸುಹೇಲ್ ಹಾಗೂ ಆಜಾದ್ ಎಂದು ಗುರುತಿಸಲಾಗಿದೆ. ಬಂಧಿತ ಮೂವರಲ್ಲಿ ಇಬ್ಬರು ಉತ್ತರ ಪ್ರದೇಶದ ನಿವಾಸಿಗಳು ಹಾಗೂ ಓರ್ವ ಆಂಧ್ರಪ್ರದೇಶದವರು ಎಂಬ ಮಾಹಿತಿ ಲಭ್ಯವಾಗಿದೆ.
ಬಂಧಿತ ಆರೋಪಿಗಳಿಂದ ಎರಡು ಪಿಸ್ತೂಲ್‌ಗಳು, ಒಂದು ಬೆರೆಟ್ಟಾ ಪಿಸ್ತೂಲ್, 30 ಜೀವಂತ ಕಾಟ್ರಿಡ್ಜ್‌ಗಳು ಹಾಗೂ 4 ಲೀಟರ್ ಕ್ಯಾಸ್ಟಲ್ ಆಯಿಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.





