ಕೋಯಿಕ್ಕೋಡ್: ಅಕ್ಟೋಬರ್ ತಿಂಗಳಿನಲ್ಲಿ 37 ಹಂದಿಗಳು ಹಠಾತ್ತನೇ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಂಚೇರಿಯ ಖಾಸಗಿ ಹಂದಿ ಫಾರ್ಮ್‌ನಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ.
ಅಧಿಕಾರಿಗಳ ಪ್ರಕಾರ ಆರಂಭದಲ್ಲಿ ಹಂದಿಗಳಲ್ಲಿ ಜ್ವರದ ಲಕ್ಷಣಗಳು ಕಂಡುಬಂದಿದ್ದವು. ಬಳಿಕ ಕುಸಿದು ಬಿದ್ದು ಸಾವನ್ನಪ್ಪಿವೆ.
ಇದನ್ನು ಓದಿ: ಅಹಮದಾಬಾದ್| ಭಯೋತ್ಪಾದಕ ಸಂಚು ವಿಫಲ: ಮೂವರು ಶಂಕಿತರು ಅರೆಸ್ಟ್
ಬಳಿಕ ಕೋಡೆಂಚೇರಿಯ ಹಿರಿಯ ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ ಡಾ.ಸಿ.ವಿ.ರವಿ ನಡೆಸಿದ ಪ್ರಾಥಮಿಕ ಪರೀಕ್ಷೆಯಲ್ಲಿ ಇದು ಆಫ್ರಿಕನ್ ಹಂದಿ ಜ್ವರ ಎಂದು ಶಂಕಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜ್ವರ ದೃಢಪಟ್ಟ ನಂತರ ಪಶುಸಂಗೋಪನಾ ಇಲಾಖೆಯು ಕೋಯಿಕ್ಕೋಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಹಂದಿ ಸಾಕಣೆ ಕೇಂದ್ರಗಳನ್ನು ಹೊಂದಿರುವ ಕೊಡೆಂಚೇರಿಯಲ್ಲಿ ಜ್ವರ ತಡೆಗಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ.





