Mysore
20
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ಬದರೀನಾಥ ದೇವಾಲಯಕ್ಕೆ ನಟ ರಜಿನಿಕಾಂತ್‌ ಭೇಟಿ

ಬದರೀನಾಥ: ಉತ್ತರಾಖಂಡದ ಇತಿಹಾಸ ಪ್ರಸಿದ್ಧ ಬದರೀನಾಥ ದೇವಾಲಯಕ್ಕೆ ಖ್ಯಾತ ನಟ ರಜನಿಕಾಂತ್ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ದೇಗುಲಕ್ಕೆ ಆಗಮಿಸಿದ ನಟನನ್ನು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಸದಸ್ಯರು ಆದರದಿಂದ ಬರಮಾಡಿಕೊಂಡು ತುಳಸಿ ಮಾಲೆ ಹಾಗೂ ದೇವರ ಪ್ರಸಾದವನ್ನು ನೀಡಿದರು.

ಚಳಿಗಾಲದ ಹಿನ್ನೆಲೆಯಲ್ಲಿ ಬದರಿನಾಥ ದೇಗುಲದ ಬಾಗಿಲುಗಳನ್ನು ಕೆಲ ದಿನಗಳಲ್ಲಿ ಮುಚ್ಚಲಾಗುತ್ತಿದ್ದು, ಅದಕ್ಕೂ ಮುನ್ನವೇ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬದರಿನಾಥನ ದರ್ಶನ ಪಡೆದುಕೊಂಡಿದ್ದಾರೆ.

ಇದನ್ನು ಓದಿ : ʼಜೈಲರ್‌’ ಯಶಸ್ಸು: ನಿರ್ಮಾಪಕರಿಂದ ರಜಿನಿಕಾಂತ್‌, ನೆಲ್ಸನ್‌ಗೆ ದುಬಾರಿ ಕಾರು ಉಡುಗೊರೆ

ಬೆಚ್ಚಗಿನ ಉಡುಪು ಧರಿಸಿ, ರಜನಿಕಾಂತ್ ಅವರು ಯಾತ್ರಾ ಮಾರ್ಗದಲ್ಲಿ ಸಾಗುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪ್ರತಿ ವರ್ಷದಂತೆ ಈ ಬಾರಿಯೂ ಉತ್ತರ ಭಾರತದ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿರುವ ತಲೈವರ್ ಕಳೆದ ಶನಿವಾರ ಋಷಿಕೇಶದ ಗಂಗಾ ನದಿಯ ದಡದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು.

ಮಾತ್ರವಲ್ಲ ಅವರು ತಮ್ಮ ಪ್ರವಾಸದ ವೇಳೆ ಸಾಮಾನ್ಯ ಮನುಷ್ಯರಂತೆ ರಸ್ತೆ ಬದಿಯ ಹೋಟೆಲ್‍ನಲ್ಲಿ ಊಟ ಸೇವಿಸಿ ಗಮನ ಸೆಳೆದಿದ್ದರು.

Tags:
error: Content is protected !!