Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ನಟ ಧರ್ಮೇಂದ್ರ ನಿಧನ ವಾರ್ತೆ ಸುಳ್ಳು: ಪತ್ನಿ ಹೇಮಾ ಮಾಲಿನಿ ಸ್ಪಷ್ಟನೆ

ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ ಅವರ ನಿಧನವಾರ್ತೆ ಸುಳ್ಳು ಎಂದು ಪತ್ನಿ ಹೇಮಾಮಾಲಿನಿ ಸ್ಪಷ್ಟನೆ ನೀಡಿದ್ದಾರೆ.

ನಟ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಈ ಕುರಿತು ಸುದ್ದಿ ಹೊರಬಿದ್ದ ತಕ್ಷಣ ಅವರ ಅಭಿಮಾನಿಗಳು ಆತಂಕಗೊಂಡಿದ್ದರು. ಆರೋಗ್ಯ ಪರಿಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ನಟ ನಿಧನರಾಗಿದ್ದಾರೆ ಎಂಬ ವದಂತಿ ಹರಡಿತ್ತು.

ಈ ಬೆಳವಣಿಗೆಗಳ ನಡುವೆ, ಪತ್ನಿ ಹೇಮಾ ಮಾಲಿನಿ ಹಾಗೂ ಪುತ್ರಿ ಇಶಾ ಡಿಯೋಲ್‌ ಅವರು ಧರ್ಮೇಂದ್ರ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವೈದ್ಯರ ವೀಕ್ಷಣೆಯಲ್ಲಿದ್ದು, ಸ್ಥಿರವಾಗಿದ್ದಾರೆ. ನಟನ ಶೀಘ್ರ ಚೇತರಿಕೆಗಾಗಿ ಎಲ್ಲರೂ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.

Tags:
error: Content is protected !!