Mysore
16
clear sky

Social Media

ಬುಧವಾರ, 22 ಜನವರಿ 2025
Light
Dark

ಯುವತಿ ಮೇಲೆ 60 ಮಂದಿಯಿಂದ 5 ವರ್ಷ ನಿರಂತರ ಅತ್ಯಾಚಾರ; ಭೀಭತ್ಸ ಘಟನೆ ಬಿಚ್ಚಿಟ್ಟ ಸಂತ್ರಸ್ತೆ!

ಕೇರಳ: 5 ವರ್ಷಗಳಿಂದ ತನ್ನ ಮೇಲೆ 64 ಮಂದಿ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿಯೊಬ್ಬಳು ಆರೋಪಿಸಿರುವುದು ಕೇರಳಾದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ.

ಸಂತ್ರಸ್ತ ಯುವತಿಯು ಕೇರಳದ ಪತ್ತನಂತಿಟ್ಟದವರಾಗಿದ್ದಾರೆ. ಸಂತ್ರಸ್ತೆಯ ನೋವಿನ ಕಥೆ ಕೇಳಿದ ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸರಿಗೆ ಮಾಹಿತಿ ನೀಡಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಯನ್ನು ಸಿಡಬ್ಲ್ಯುಸಿ(ಮಕ್ಕಳ ಕಲ್ಯಾಣ ಸಮಿತಿ) ಮತ್ತು ಮನಶಾಸ್ತ್ರಜ್ಞರ ಜೊತೆಗೂ ಸಮಾಲೋಚನೆ ನಡೆಸಿದ್ದಾರೆ. ನನಗೆ 13 ವರ್ಷವಾಗಿದ್ದ ವೇಳೆ ಈ ಕಹಿ ಅನುಭವವಾಯಿತು. ಪುರುಷನೊಬ್ಬ ನನಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದ. ಆಗ ನನ್ನ ವಯಸ್ಸು 18 ಎಂದು ಬಹಿರಂಗಪಡಿಸಿದಳು.

ನಾನು ಶಾಲೆಗೆ ಓದುತ್ತಿದ್ದ ವೇಳೆ ಕಹಿ ಅನುಭವಗಳು ಆದವು. ಕ್ರೀಡೆಯಲ್ಲಿ ಸಕ್ರಿಯವಾಗಿರುವಾಗ ಹುಡುಗರು ಮತ್ತು ತರಬೇತಿದಾರರು ಕೂಡ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಮಿತಿ ಮುಂದೆ ಕೆಲವು ವಿಡಿಯೋಗಳನ್ನು ನೊಂದ ಯುವತಿ ಹಂಚಿಕೊಂಡಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೂ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ ನೊಂದಿರುವ ಯುವತಿಯಿಂದ ಇನ್ನು ಹೆಚ್ಚಿನ ವಿವರಣೆಗಳನ್ನು ಪಡೆಯಲು ಸಿಡಬ್ಲ್ಯುಸಿ ಮುಂದಾಗಿದೆ.

ನೊಂದಿರುವ ಯುವತಿಯ ಜೀವನಕ್ಕೆ ಅಪಾಯವಿದೆ. ಹೀಗಾಗಿ ಅವರಿಗೆ ನಾವು ಅಗತ್ಯವಾದ ಭದ್ರತೆ ಮತ್ತು ಆರೈಕೆಯನ್ನು ನೀಡಲಿದ್ದೇವೆ ಎಂದು ಪಟ್ಟಣಂತಿಟ್ಟ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎನ್.ರಾಜೀವ್ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪೊಕ್ಸೋ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಪಟ್ಟಣಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮೇಲುಸ್ತುವಾರಿಯಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಯುವತಿಗೆ ಮೊಬೈಲ್ ಫೋನ್ ಇಲ್ಲದ ಕಾರಣ ತಂದೆಯ ಮೊಬೈಲ್ ಬಳಸುತ್ತಿದ್ದಳು. ಈ ಫೋನ್‍ನಲ್ಲಿ ಯುವತಿ ತನಗೆ ಲೈಂಗಿಕ ಕಿರುಕುಳ ನೀಡಿದ ಸುಮಾರು 40 ಮಂದಿಯ ಹೆಸರು ಹಾಗೂ ದೂರವಾಣಿ ಸಂಖ್ಯೆಗಳನ್ನು ದಾಖಲಿಸಿದ್ದಾಳೆ.

ಯುವತಿಯ ಹೃದಯ ವಿದ್ರಾವಕ ಕಥೆ ಕೇಳಿ ಆಘಾತಗೊಂಡ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಈ ಆರೋಪಗಳು ನಿಜವೇ ಎಂದು ದೃಢಪಡಿಸಿಕೊಳ್ಳುವ ಸಲುವಾಗಿ ಮನಃಶಾಸ್ತ್ರಜ್ಞರಿಂದ ಕೌನ್ಸಿಲಿಂಗ್ ಮಾಡಿಸಿದ್ದಾರೆ. ಇದು ಅಪರೂಪದ ಪ್ರಕರಣ ಎಂಬ ಕಾರಣದಿಂದ ಪೊಲೀಸ್ ವರಿಷ್ಠಾಧಿಯವರಿಗೆ ಮಾಹಿತಿ ನೀಡಿ ತನಿಖೆಯ ಮೇಲೆ ನಿಗಾ ಇಡುವಂತೆ ಮನವಿ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ.

ಸದ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪೊಕ್ಸೋ ಕಾಯ್ದೆ ಸೇರಿದಂತೆ ಪ್ರಕರಣಗಳು ದಾಖಲಾಗಿವೆ. ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

Tags: