ಅಸ್ಸಾಂ: ಅಸ್ಸಾಂನಲ್ಲಿ ಮುಂಗಾರು ಭಾರೀ ಚುರುಕಾಗಿದ್ದು, ವಿಪರೀತ ಗಾಳಿ ಮಳೆ ಉಂಟಾಗಿದೆ. ವರುಣನ ಆರ್ಭಟಕ್ಕೆ ಇಡೀ ಅಸ್ಸಾಂ ಬೆಚ್ಚಿ ಬಿದ್ದಿದೆ.
ಅಸ್ಸಾಂನಲ್ಲಿ ಭಾರೀ ಮಳೆಯಿಂದಾಗಿ ದೇಶದ ಪ್ರಮುಖ ಉದ್ಯಾನವನಗಲ್ಲಿ ಒಂದಾದ ಕಾಜಿರಂಗ ಉದ್ಯಾನವನ ಭಾಗಶಃ ಮುಳುಗಡೆಯಾಗಿದೆ. ಈ ಉದ್ಯಾನವನದಲ್ಲಿ ಕನಿಷ್ಠ 132 ಪ್ರಾಣಿಗಳು ಮರಣಹೊಂದಿದ್ದು, ಅದರಲ್ಲಿ 6 ಘೇಂಡಾಮೃಗ ಹಾಗೂ 117 ಜಿಂಕೆಗಳು ನಿಧನವಾಗಿದೆ ಎಂದು ಹೇಳಲಾಗಿದೆ. ಜತೆಗೆ 96 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಪೈಕಿ 98 ಪ್ರಾಣಿಗಳು ಜಲಾವೃತವಾಗಿ ಮರಣ ಹೊಂದಿದರೇ, 2 ಪ್ರಾಣಿಗಳು ವಾಹನದಲ್ಲಿ ಮೃತಪಟ್ಟಿವೆ. ಇನ್ನು 25 ಪ್ರಾಣಿಗಳು ಚಿಕಿತ್ಸೆ ಪಡೆಯುವಾಗ ಸಾವು ಕಂಡಿವೆ ಎಂದು ಹೇಳಲಾಗಿದೆ. ಇದರ ಜೊತೆಗೆ 25 ಪ್ರಾಣಿಗಳು ವೈದ್ಯಕೀಯ ಹಾರೈಕೆಯಲ್ಲಿವೆ ಎಂದು ತಿಳಿಸಿದೆ.
ಇದೇ ಅಸ್ಸಾಂನಲ್ಲಿ 2017ರಲ್ಲಿ ಸಂಭವಿಸಿದ ಭಾರೀ ಪ್ರವಾಹದಲ್ಲಿ 350ಕ್ಕೂ ಹೆಚ್ಚಿನ ಪ್ರಾಣಿಗಳು ಸಾವನ್ನಪ್ಪಿದ್ದವು. ಇದಾದ ಬಳಿಕ ಈಗ ಪ್ರವಾಹದಿಂದ ಪ್ರಾಣಿಗಳು ಸಾಯುತ್ತಿದ್ದು, ಪ್ರಾಣಿಗಳ ಮರಣ ಸಂಖ್ಯೆ 150ರ ಗಡಿ ತಲುಪಿದೆ.