Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಯುವ ಸಂಭ್ರಮ | ಮೋಡಿ ಮಾಡಿದ ಶಿವತಾಂಡವ, ಶಿಳ್ಳೆ ಚಪ್ಪಾಳೆಯ ಝೇಂಕಾರ

dasara programme

ಮೈಸೂರು : ದಸರಾ ರಂಗು ಹೆಚ್ಚಿಸುತ್ತಿರುವ ಯುವ ಸಂಭ್ರಮದಲ್ಲಿ ಶಿವತಾಂಡವ ಕುರಿತ ನೃತ್ಯ ರೂಪಕ ಗಮನ ಸೆಳೆಯಿತು.

ಸಾಂಸ್ಕೃತಿಕ ವೈಭವ, ಜಾನಪದ ಸಂಸ್ಕೃತಿ, ಶಿಕ್ಷಣದ ಮಹತ್ವ ಸಾರಿ ಹೇಳುವ ನೃತ್ಯ ರೂಪಕಗಳು ಮಾನಸಗಂಗೋತ್ರಿಯ ಬಯಲು ರಂಗಮಂದಿರವನ್ನು ಆವರಿಸಿ ನೋಡುಗರನ್ನು ವಿಸ್ಮಿತರನ್ನಾಗಿಸಿದವು.

ಮೈಸೂರು ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಸಾಹಿತ್ಯ ಪ್ರಕಾರದ ನೃತ್ಯ, ಕೊಳ್ಳೇಗಾಲ ವಿದ್ಯಾನಗರ ಜೆ.ಎಸ್.ಎಸ್ ಶುಶ್ರೂಷ್ ಶಾಲೆ ಜಾನಪದ ನೃತ್ಯ, ಮೈಸೂರು ಸರಸ್ವತಿ ಪುರಂ ಜೆ ಎಸ್ ಎಸ್ ಮಹಿಳಾ ಐ ಟಿಐ ಡಿ ಎಲ್ ಡಿ ಕಾಲೇಜಿನ ವಿದ್ಯಾರ್ಥಿಗಳು ಶಿವತಾಂಡವ ನೃತ್ಯಗಳು ಯುವಕರ ಶಿಳ್ಳೆ ಚಪ್ಪಾಳೆಯ ಝೇಂಕಾರ ಮಾಡಿದವು.

ಇಂದು ನಡೆದ ಕಾರ್ಯಕ್ರಮದಲ್ಲಿ 53 ನೃತ್ಯ ಪ್ರದರ್ಶನಗಳನ್ನು ಮಾಡಲಾಯಿತು. ದೇಶಭಕ್ತಿ ಸ್ವಾತಂತ್ಯ ಚಳುವಳಿ, ಯುವಜನತೆಯ ರೈತರು & ಯೋಧರು, ಆದಿಶಕ್ತಿ, ವೀರವನತಿಯರ ಕುರಿತು, ಮತದಾನ ಮತ್ತು ಪ್ರಜಾಪ್ರಭುತ್ವ, ಕನ್ನಡ ಸಂಸ್ಕೃತಿ, ಭಾರತೀಯ ಸೈನ್ಯದಲ್ಲಿ ಮಹಿಳಾಯೋಧರು ಹೀಗೆ ಮಂಡ್ಯ, ಮೈಸೂರು, ವಿಜಯಪುರ, ಮದ್ದೂರು, ಬೆಂಗಳೂರು, ಹುಣಸೂರು ನಾನಾ ಕಡೆಯ ಕಾಲೇಜಿನ ವಿದ್ಯಾರ್ಥಿಗಳು ಈ ರೀತಿಯ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

Tags:
error: Content is protected !!