ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದ್ದು, ಉದ್ಘಾಟಕಿ ಬಾನು ಮುಷ್ತಾಕ್ ಅವರು ಭಾಷಣ ಹೀಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಾನು ಮುಷ್ತಾಕ್ ಅವರು, ಈ ದಿನ ದಸರಾ ಉತ್ಸವದ ಉದ್ಘಾಟನೆಯನ್ನು ತಾಯಿ ಚಾಮುಂಡೇಶ್ವರಿ ಕೃಪಾರ್ಶಿವಾದದಿಂದ ಉದ್ಘಾಟಿಸಿದ್ದೇನೆ.
ನನ್ನ ಗೆಳತಿಯೊಬ್ಬರು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರುತ್ತೇನೆ ಎಂದು ಹರಕೆ ಹೊತ್ತಿದ್ದಳು. ಬರಲು ಸಾಧ್ಯವಾಗಿರಲಿಲ್ಲ. ಆದರೆ ರಾಜ್ಯ ಸರ್ಕಾರದ ಮೂಲಕ ನನ್ನನ್ನು ಚಾಮುಂಡೇಶ್ವರಿ ಕರೆಸಿಕೊಂಡಿದ್ದಾಳೆ. ಒಂದು ಚರಿತ್ರಿಕ ಸನ್ನಿವೇಶಗಳು ಉದ್ಭವವಾದರು ತಾಯಿ ಚಾಮುಂಡೇಶ್ವರಿ ಕರೆಸಿಕೊಂಡಿದ್ದಾಳೆ. ಸಾಂಸ್ಕೃತಿಕ ಉತ್ಸವ ಎಲ್ಲರನ್ನು ಸಮನ್ವಯಗೊಳಿಸುತ್ತದೆ. ಈ ಮಣ್ಣಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಪಾಲ್ಗೊಳ್ಳುವ ಅವಕಾಶ ಇದೆ. ಕನ್ನಡ ಭಾಷೆಯ ಹೃದಯದ ಸ್ಪಂದನೆಗೆ ಈ ಹಬ್ಬ ನೆನಪಿಸುತ್ತದೆ. ಏಕತೆಯ ಸುಗಂಧ ಈ ಹಬ್ಬದ ಪ್ರತೀಕವಾಗಿದೆ ಮೈಸೂರಿನ ಉರ್ದು ಭಾಷಿಕರು ದಸರಾ ಹಬ್ಬದ ಎಲ್ಲಾ ಹತ್ತು ದಿನಗಳಲ್ಲೂ ತಮ್ಮ ಗುರುತುಗಳನ್ನು ನೀಡಿದ್ದಾರೆ.
ಎಲ್ಲರನ್ನು ಒಳಗೊಂಡು ಆಚರಿಸುವ ಸಂಸ್ಕೃತಿ ಇದಾಗಿದೆ. ನನ್ನ ಮಾವ ಮೈಸೂರು ಮಹಾರಾಜರ ಅಂಗ ರಕ್ಷಕರಾಗಿದ್ದರು. ಅಂತಹ ಅನೇಕ ಮುಸ್ಲಿಂಮರು ಮಹಾರಾಜರಿಗೆ ಅಂಗರಕ್ಷಕರಾಗಿದ್ದರು. ಮಹಾರಾಜರು ಮುಸ್ಲಿಂರನ್ನು ನಂಬಿ ಅವರನ್ನು ಅಂಗರಕ್ಷಕರಾಗಿ ಇಟ್ಟು ಕೊಂಡಿದ್ದು ಬಹಳ ಖುಷಿ. ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸೋಣ. ಈ ದಸರಾ ಕೇವಲ ಮೈಸೂರಿಗೆ ಸೀಮಿತವಾಗದೆ ಇಡೀ ಜಗತ್ತಿನ ಮಾನವ ಕುಲಕ್ಕೆ ಶಾಂತಿ, ನ್ಯಾಯ, ಸಮಾನತೆಯ ದೀಪವಾಗಲಿ. ಈ ದಸರಾ ಆಚರಣೆ ಇಡೀ ಪ್ರಪಂಚಾದ್ಯಂತ ನೆಲೆ ಕಂಡುಕೊಳ್ಳಲಿ ಎಂದು ಆಶಿಸುತ್ತೇನೆ.
ನಾವೆಲ್ಲರೂ ಒಂದೇ ಗಗನದಡಿಯ ಪಯಣಿಗರು. ಮನುಷ್ಯ ಮಾತ್ರ ಗಡಿಗಳನ್ನು ಹಾಕಿಕೊಂಡಿರುತ್ತಾನೆ. ಪರಿಸರ ಎಂದಿಗೂ ಗಡಿ ಹಾಕಿಕೊಳ್ಳುವುದಿಲ್ಲ.. ಸ್ತ್ರೀ ಎಂದರೆ ಕೇವಲ ತಾಯಿ ಮಾತ್ರವಲ್ಲ ಅನ್ಯಾಯದ ವಿರುದ್ಧ ಹೊರಡುವ ಶಕ್ತಿಯು ಹೌದು. ನಾವೆಲ್ಲರೂ ಒಂದೇ ಗಗನದಡಿಯ ಪಯಣಿಗರು. ಮನುಷ್ಯ ಮಾತ್ರ ಗಡಿಗಳನ್ನು ಹಾಕಿಕೊಂಡಿರುತ್ತಾನೆ. ಪರಿಸರ ಎಂದಿಗೂ ಗಡಿ ಹಾಕಿಕೊಳ್ಳುವುದಿಲ್ಲ.. ನಾನು ನೂರಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಮಂಗಳಾರತಿಯನ್ನು ತೆಗೆದುಕೊಂಡಿದ್ದೇನೆ. ಎಷ್ಟೇ ಸವಾಲುಗಳು ಬಂದರು ದಿಟ್ಟವಾಗಿ ನಿಂತು ನೈತಿಕ ಬೆಂಬಲ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಭಾಷಣ ಮುಗಿಸಿದರು.





