ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಅರಮನೆ ಆವರಣದಲ್ಲಿ ಜಂಬೂಸವಾರಿ ರಿಹರ್ಸಲ್ ನಡೆಸಲಾಯಿತು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಮೈಸೂರು ಅರಮನೆ ಆವರಣದಲ್ಲಿ ದಸರಾ ಆನೆಗಳು ಹಾಗೂ ಅಶ್ವಾರೋಹಿ ಪಡೆಗೆ ರಿಹರ್ಸಲ್ ನಡೆಸಲಾಯಿತು.
ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಅರಣ್ಯಾಧಿಕಾರಿ ರವಿಶಂಕರ್ ಹಾಗೂ ಡಿಸಿಎಫ್ ಡಾ.ಪ್ರಭುಗೌಡ ಅವರು ಅಭಿಮನ್ಯುವಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಇದನ್ನು ಓದಿ : ದಸರಾ: ಜಂಬೂ ಸವಾರಿಯತ್ತ ಜನರ ಚಿತ್ತ
ಜಂಬೂಸವಾರಿ ಮೆರವಣಿಗೆಯಲ್ಲಿ ಆನೆಗಳು, ಅಶ್ವರೋಹಿ ದಳದ ಕುದುರೆಗಳು, ಪೊಲೀಸ್ ಬ್ಯಾಂಡ್ ಸಾಗಿದ್ದು, 21 ಬಾರಿ ಕುಶಾಲತೋಪು ಸಿಡಿಸಿ, ರಾಷ್ಟ್ರಗೀತೆಗೆ ಗೌರವ ಸಲ್ಲಿಕೆ ಮಾಡಲಾಯಿತು.
ನಿಶಾನೆ ಆನೆಯಾಗಿ ಮೊದಲಿಗೆ ಧನಂಜಯ ಹೆಜ್ಜೆ ಹಾಕಿದ್ದು, ನೌಪತ್ ಆನೆಯಾಗಿ ಗೋಪಿ ಹೆಜ್ಜೆ ಹಾಕಿದನು. ಮೊದಲ ಹಂತದ ಸಾಲಾನೆಯಲ್ಲಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ ಆನೆಗಳು ಹೆಜ್ಜೆ ಹಾಕಿದ್ದು, ಎರಡನೇ ಹಂತದಲ್ಲಿ ಕಂಜನ್, ಭೀಮ, ಏಕಲವ್ಯ ಹೆಜ್ಜೆ ಹಾಕಿದವು.
ಮೂರನೇ ಹಂತದಲ್ಲಿ ಪ್ರಶಾಂತ, ಸುಗ್ರೀವ, ಹೇಮಾವತಿ ಆನೆಗಳು ಹೆಜ್ಜೆ ಹಾಕಿದ್ದು, ಕ್ಯಾಪ್ಟನ್ ಅಭಿಮನ್ಯುವಿನ ಜೊತೆ ಕುಮ್ಕಿ ಆನೆಗಳಾಗಿ ಕಾವೇರಿ, ರೂಪ ಆನೆಗಳು ಹೆಜ್ಜೆ ಹಾಕಿದವು.





