ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರಿಗೆ ಭರಪೂರ ಮನರಂಜನೆ ದೊರೆಯುತ್ತಿದೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ವೈಮಾನಿಕ ಪ್ರದರ್ಶನದ ರಿಹರ್ಸಲ್ ನಡೆಸಲಾಯಿತು.
ಇದನ್ನೂ ಓದಿ: https://andolana.in/wp-admin/post.php?post=235107&action=edit
ಮೈಸೂರಿನ ಬನ್ನಿಮಂಟಪದಲ್ಲಿ ನಡೆದ ರಿಹರ್ಸಲ್‌ನಲ್ಲಿ ಸೂರ್ಯಕಿರಣ ತಂಡವು 9 ಫೈಟರ್ ಜೆಟ್‌ಗಳ ಮೂಲಕ ಸಾಹಸ ಪ್ರದರ್ಶನ ನಡೆಸಿತು. ಬರೋಬ್ಬರಿ 20 ನಿಮಿಷಗಳ ಕಾಲ ನಡೆದ ಸೂರ್ಯಕಿರಣ ತಂಡದ ಸಾಹಸ ಪ್ರದರ್ಶನಕ್ಕೆ ಜನತೆ ಮನಸೋತರು.
ಈ ಮೂಲಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರಿಗೆ ಭರಪೂರ ಮನರಂಜನೆ ಸಿಗುತ್ತಿದ್ದು, ವಿಜಯದಶಮಿ ದಿನದಂದು ಜಂಬೂಸವಾರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ.





