ಮೈಸೂರು: ಗ್ಯಾರಂಟಿ ಯೋಜನೆಗಳನ್ನು ರಾಜಕೀಯಕ್ಕಾಗಿ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ, ಜೆಡಿಎಸ್‌ನವರು ಗ್ಯಾರಂಟಿ ಯೋಜನೆ ಲಾಭ ಪಡೆಯಲ್ವಾ? ಎಂದು ಪ್ರಶ್ನಿಸಿದರು. ಎಲ್ಲಾ ಜನರಿಗಾಗಿ ಗ್ಯಾರಂಟಿ ಯೋಜನೆ ತಂದಿದ್ದೇವೆ.ಗುಡಿ, ಚರ್ಚ್, ಮಸೀದಿ ಬಿಟ್ಟು ಹೊರ ಬನ್ನಿ ಎಂದು ಕುವೆಂಪು ಹೇಳಿದ್ದಾರೆ. ಧರ್ಮದ ಆಧಾರದ ಮೇಲೆ ಜಾತಿ ಆಧಾರದ ಮೇಲೆ ಸಮಾಜ ಒಡೆಯಬಾರದು.
ಇದು ನಾಡಿನ ಜನರ ಹಬ್ಬ. ಇದು ಒಂದು ಧರ್ಮ, ಒಂದು ಜಾತಿ ಹಬ್ಬ ಅಲ್ಲ. ಗ್ಯಾರಂಟಿ ಮುಂದುವರಿಸಿದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಕೊಂಕು ಆಡಿದರು. ಈಗ ರಾಜ್ಯವೇನೂ ದಿವಾಳಿ ಆಗಿದ್ದೆಯಾ? ಯಾರು ಗ್ಯಾರಂಟಿ ವಿರೋಧ ಮಾಡಿದರು ಅವರೇ ಇದನ್ನು ಕಾಪಿ ಮಾಡೋಕೆ ಶುರು ಮಾಡಿದ್ದಾರೆ.
ಕರ್ನಾಟಕ ತಲಾ ಆದಾಯದಲ್ಲಿ ಹೆಚ್ಚಳವಾಗಿದೆ. ಕರ್ನಾಟಕ ತಲಾ ಆದಾಯ ಹೆಚ್ಚಳದಲ್ಲಿ ಇಡೀ ದೇಶದಲ್ಲೇ ನಂಬರ್ ಓನ್. ಗ್ಯಾರಂಟಿ ಯೋಜನೆಯಿಂದ ಎಲ್ಲರ ಆದಾಯ ಹೆಚ್ಚಳವಾಗಿದೆ ಎಂದು ಹೇಳಿದರು.





