ಮೈಸೂರು: ಮೈಸೂರಿನಲ್ಲಿ ಒಂದು ಕಡೆ ದಸರಾ ಮಹೋತ್ಸವ ಕಾರ್ಯಕ್ರಮಗಳು ಜನರನ್ನು ಅಕರ್ಷಣೆ ಮಾಡಿದ್ರೆ ಮತ್ತೊಂದು ಕಡೆ ವಿಂಟೇಜ್ ಕಾರುಗಳು ಎಲ್ಲರನ್ನು ಅಕರ್ಷಣೆ ಮಾಡುತ್ತಿದೆ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ಗೋಪಿನಾಥ್ ಅವರು ಕಳೆದ 4 ವರ್ಷದಿಂದ ವಿಂಟೇಜ್ ಕಾರುಗಳನ್ನು ಪ್ರದರ್ಶನ ಮಾಡಿಕೊಂಡು ಬರುತ್ತಿದ್ದಾರೆ.
ಇದನ್ನು ಓದಿ : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೃಹತ್ ಕೇಕ್ ಶೋ ಆಯೋಜನೆ
ಈ ವರ್ಷ ಸುಮಾರು 50ಕ್ಕೂ ಹೆಚ್ಚಿನ ಅಪರೂಪದ ಕಾರುಗಳು 40ಕ್ಕೂ ಹೆಚ್ಚಿನ ಬೈಕ್‌ಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಸೆಪ್ಟೆಂಬರ್ 26ರವರೆಗೆ ಈ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
1909 ರಿಂದ 1970 ರವರೆಗಿನ ವಿಂಟೇಜ್ ಕಾರುಗಳನ್ನು ಪ್ರದರ್ಶನ ಮಾಡಲಾಗಿದ್ದು, ವಿಶೇಷವಾಗಿ ಜಿಪಿಡಬ್ಲೂ, ಯುಎಸ್ ಆರ್ಮಿ ಟ್ರಕ್, 1970ರ ಲ್ಯಾಂಡ್ ರೋವರ್ ಸರಣಿ 3, 1949 ರ ಬೆಡ್ ಫೋರ್ಡ್ 1937 ಮರ್ಸಿಡಿಸ್ ಬೆಂಜ್ ವೋಕ್ಸ್ ವ್ಯಾಗನ್ ಬೀಟಲ್ ಸೇರಿದಂತೆ 40ಕ್ಕೂ ಹೆಚ್ಚಿನ ಹಳೆಯ ಪ್ರಮುಖ ಬೈಕ್‌ಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಈ ವಿಂಟೇಜ್ ಕಾರುಗಳ ಪ್ರದರ್ಶನವನ್ನು ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಉದ್ಘಾಟನೆ ಮಾಡಿದರು. ನಂತರ ಅಪರೂಪದ ಹಳೆಯ ಕಾರುಗಳನ್ನು ಅರುಣ್ ಯೋಗಿರಾಜ್ ಅವರು ಚಾಲನೆ ಮಾಡಿ ಖುಷಿಪಟ್ಟರು.





