ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಂದು ಪಾರಂಪರಿಕ ಸೈಕಲ್ ಸವಾರಿಯನ್ನು ಆಯೋಜನೆ ಮಾಡಲಾಗಿತ್ತು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ಪುರಾತತ್ವ ಸಂಗ್ರಹಾಲಯಗಳು, ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪಾರಂಪರಿಕ ಸೈಕಲ್ ಸವಾರಿಯನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಸೈಕಲಿಸ್ಟ್ ನವೀನ್ ಡಿ.ಎನ್ ಸೋಲಂಕಿ ಅವರು, ಸೈಕಲ್ ಸವಾರಿಗೆ ಚಾಲನೆ ಕೊಟ್ಟರು.
ಇದನ್ನು ಓದಿ : Mysuru Dasara | ಅರಮನೆ ಅಂಗಳದಲ್ಲಿ ಮೇಳೈಸಿದ ಜಾನಪದ ಗಾನ ವೈಭವ
10 ದಿನ 14 ಗಂಟೆಗಳಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸೈಕಲ್‌ನಲ್ಲಿ ಪ್ರಯಾಣ ಮಾಡಿ ದಾಖಲೆ ಮಾಡಿರುವ ಮೈಸೂರಿನ ಯುವಕ ನವೀನ್ ಡಿ.ಎನ್ ಸೋಲಂಕಿ ಅವರು, ಪಾರಂಪರಿಕ ಕಟ್ಟಡಗಳ ಕುರಿತು ಸೈಕಲ್ ಸವಾರಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞರಾದ ಪ್ರೊ.ಡಾ.ರಂಗರಾಜು, ಸರ್ವಪಿಳ್ಳೈ ಐಯ್ಯಂಗಾರ್, ಪುರಾತತ್ತ್ವ ಇಲಾಖೆ ಆಯುಕ್ತ ಎ.ದೇವರಾಜು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸೈಕಲ್ ಜಾಥಾದಲ್ಲಿ ನೂರಾರು ಯುವಕ ಯುವತಿಯರು ಭಾಗಿಯಾಗಿ ಖುಷಿಪಟ್ಟರು.





