Mysore
16
clear sky

Social Media

ಮಂಗಳವಾರ, 20 ಜನವರಿ 2026
Light
Dark

ನನ್ನ ಹೆಸರಲ್ಲೇ ಶಿವ ರಾಮ ಇದ್ದಾರೆ : ಸಿಎಂ ಸಿದ್ದರಾಮಯ್ಯ

ಮೈಸೂರು : ಬಾನು ಮುಷ್ತಾಕ್‌ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೂ ಕನ್ನಡ ಲೇಖಕಿ ಹಾಗೂ ಹೋರಾಟಗಾರ್ತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾನು ಮುಸ್ತಾಕ್ ಮುಸ್ಲಿಂ ಸಮುದಾಯಕ್ಕೆ ಸೇರಿದ್ರು ಕನ್ನಡ ಲೇಖಕಿ ಹೋರಾಟಗಾರ್ತಿ. ಅನೇಕ ಸಂಘಟನೆಗಳ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಬಾನು ಮುಸ್ತಾಕ್ ಧೀಮಂತ ಮಹಿಳೆ. ಸಾಹಿತ್ಯದಲ್ಲಿ ಕರ್ನಾಟಕಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರೋದು ಇದೆ ಮೊದಲು. ದೀಪಾ ಬಸ್ತಿ ಬಾನು ಮುಸ್ತಾಕ್ ಇಬ್ಬರನ್ನು ಸರ್ಕಾರದಿಂದ ಗೌರವಿಸಿದ್ದೇವೆ.

ಬಾನು ಮುಸ್ತಾಕ್ ದಸರಾ ಉದ್ಘಾಟನೆಯನ್ನ ಕೆಲವರು ವಿರೋಧ ಮಾಡಿದ್ರು. ದಸರಾ ನಾಡ ಹಬ್ಬ ಇದು ಎಲ್ಲರು ಸೇರಿ ಮಾಡುವ ದಸರಾ. ಇದನ್ನ ವಿರೋಧ ಮಾಡೋರು ದಡ್ಡರು ಮೂರ್ಖರು. ಇದನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋದ್ರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸಂವಿಧಾನ ಸರಿಯಾಗಿ ಓದಿ ಅಂತ ಹೇಳ್ತು. ನನ್ನ ಹೆಸರಿನಲ್ಲಿ ಇಬ್ಬರು ದೇವರಿದ್ದಾರೆ. ಶಿವ ರಾಮ ಇಬ್ಬರು ಇದ್ದಾರೆ. ನಾನು ಹಿಂದೂ ಅಲ್ವಾ. ಪ್ರತಾಪ್ ಸಿಂಹಗಿಂತಲು ಹಿಂದೂ ನಾನು ಎಂದು ಪ್ರತಾಪ್‌ ಸಿಂಹ ವಿರುದ್ಧ ಕಿಡಿಕಾರಿದರು.

Tags:
error: Content is protected !!