ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಪಾರಂಪರಿಕ ಕಟ್ಟಡಗಳ ಇತಿಹಾಸ ತಿಳಿಸಲು ಪಾರಂಪರಿಕ ನಡಿಗೆಯನ್ನು ಆಯೋಜನೆ ಮಾಡಲಾಗಿತ್ತು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ಯುವಕ-ಯುವತಿಯರು ಪಾರಂಪರಿಕ ಕಟ್ಟಡಗಳ ಉಳಿವಿನ ಬಗ್ಗೆ ಪೋಸ್ಟರ್ ಹಿಡಿದು ಸಾಗಿದರು.
ನಗರದ ಟೌನ್‌ಹಾಲ್‌ನಿಂದ ಆರಂಭವಾದ ಪಾರಂಪರಿಕ ನಡಿಗೆಗೆ ನಗರಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಪಾರಂಪರಿಕ ನಡಿಗೆಯು 10ನೇ ಚಾಮರಾಜ ಒಡೆಯರ್ ವೃತ್ತ, ಕೆ.ಆರ್.ವೃತ್ತ, ಕೆ.ಆರ್.ಆಸ್ಪತ್ರೆ, ಗಾಂಧಿ ವೃತ್ತದ ಮೂಲಕ ಮತ್ತೆ ಟೌನ್ ಹಾಲ್‌ಗೆ ಕೊನೆಗೊಂಡಿತು.
ಇದನ್ನು ಓದಿ : ಮೈಸೂರು: ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೈಕಲ್ ರ್ಯಾಲಿ
ಈ ಮೂಲಕ ಯುವ ಸಮೂಹವು ಮೈಸೂರಿನ ಪಾರಂಪರಿಕ ಕಟ್ಟಡಗಳ ಇತಿಹಾಸ ತಿಳಿಯಲು ಮುಂದಾಗಿದ್ದು, ಮಾರ್ಗಮಧ್ಯೆ ಸಿಗುವ ಕಟ್ಟಡಗಳ ಬಗ್ಗೆ ಯುವಕರಿಗೆ ಮಾಹಿತಿ ನೀಡಲಾಯಿತು.
ಪಾರಂಪರಿಕ ನಡಿಗೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಪಾರಂಪರಿಕ ಕಟ್ಟಡಗಳ ಇತಿಹಾಸ, ವಾಸ್ತುಶಿಲ್ಪ ಶೈಲಿಯ ಮಹತ್ವ ತಿಳಿದುಕೊಂಡು ಖುಷಿಪಟ್ಟರು.
ಈ ವೇಳೆ ಇತಿಹಾಸ ತಜ್ಞರಾದ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್, ಡಾ.ರಂಗರಾಜು ಅವರು, ವಿದ್ಯಾರ್ಥಿಗಳಿಗೆ ಪಾರಂಪರಿಕ ಕಟ್ಟಡಗಳ ಇತಿಹಾಸ ತಿಳಿಸಿದರು.





