ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಇಂದು ದಸರಾ ಗಜಪಡೆ ಹಾಗೂ ಅಶ್ವಾರೋಹಿ ದಳದ ಕುದುರೆಗಳಿಗೆ ಅಂತಿಮ ಹಂತದ ಸಿಡಿಮದ್ದು ಸಿಡಿಸುವ ತಾಲೀಮನ್ನು ನಡೆಸಲಾಯಿತು.
ಮೂರನೇ ಹಂತದ ತಾಲೀಮಿನಲ್ಲಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ 14 ಆನೆಗಳು ಅಂದರೆ ಕ್ಯಾಪ್ಟನ್ ಅಭಿಮನ್ಯು, ಮಹೇಂದ್ರ, ಭೀಮಾ, ಪ್ರಶಾಂತ, ಲಕ್ಷ್ಮೀ, ಹೇಮಾವತಿ, ರೂಪ, ಕಾವೇರಿ, ಕಂಜನ್, ಏಕಲವ್ಯ, ಸುಗ್ರೀವ, ಶ್ರೀಕಂಠ, ಧನಂಜಯ, ಗೋಪಿ ಸೇರಿದಂತೆ 14 ಆನೆಗಳು ಸಿಡಿಮದ್ದು ತಾಲೀಮಿನಲ್ಲಿ ಭಾಗಿಯಾಗಿದ್ದವು.
ಇದನ್ನು ಓದಿ : ಬಾನು ಮುಷ್ತಾಕ್ ನಮ್ಮ ಸಂಪ್ರದಾಯದ ರೀತಿ ದಸರಾ ಉದ್ಘಾಟನೆ ಮಾಡಿದ್ದಾರೆ: ಶಾಸಕ ಶ್ರೀವತ್ಸ
7 ಪಿರಂಗಿ ಗಾಡಿಗಳ ಮೂಲಕ 21 ಸುತ್ತುಗಳ ಸಿಡಿಮದ್ದು ಸಿಡಿಸುವ ಮೂಲಕ ನಡೆದ ತಾಲೀಮಿನಲ್ಲಿ ದಸರಾ ಗಜಪಡೆ ಬೆದರದೇ ನಿಂತಿದ್ದವು. ಕುಶಾಲತೋಪು ಸಿಡಿಸುವ ಕೊನೆಯ 3ನೇ ಹಂತದ ತಾಲೀಮಿನಲ್ಲಿ ಅಶ್ವಾರೋಹಿ ದಳದ 36ಕ್ಕೂ ಹೆಚ್ಚು ಕುದುರೆಗಳು ಭಾಗಿಯಾಗಿದ್ದವು.
ಈ ಮೂಲಕ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ದಸರಾ ಗಜಪಡೆ ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ಕ್ಯಾಪ್ಟನ್ ಅಭಿಮನ್ಯ ಜಂಬೂಸವಾರಿ ದಿನದಂದು ಚಿನ್ನದ ಅಂಬಾರಿ ಹೊತ್ತು ರಾಜಬೀದಿಗಳಲ್ಲಿ ಹೆಜ್ಜೆ ಹಾಕಲಿದ್ದಾನೆ.





