ಮೈಸೂರು : ನಾಡಹಬ್ಬ ಮೈಸೂರು ದಸರಾ ಅಂತಿಮ ಚರಣ ತಲುಪಿದೆ. ಜಂಬೂ ಸವಾರಿ ಬನ್ನಿಮಂಟಪ ತಲುಪಿದ ಬಳಿಕ ಅಲ್ಲಿ ನಡೆಯುವ ಟಾರ್ಚ್ ಲೈಟ್ ಪರೇಡ್ ನೊಂದಿಗೆ ಮೈಸೂರು ದಸರಾಸಂಪನ್ನಗೊಳ್ಳುತ್ತದೆ.
ಇದನ್ನು ಓದಿ : ಬೆಳೆ ನಷ್ಟ | ಸಮೀಕ್ಷೆ ಮುಗಿದ ಬಳಿಕ ಪರಿಹಾರ ವಿತರಣೆ ; ಸಿಎಂ
ಸತತವಾಗಿ ಏಳು ವರ್ಷ ಅಂಬಾರಿ ಹೊತ್ತು ನಗರದ ರಸ್ತೆಗಳಲ್ಲಿ ಅದೇ ಗಾಂಭೀರ್ಯದೊಂದಿಗೆ ಸಾಗುತ್ತಿರುವ ಅಭಿಮನ್ಯುನನ್ನು ನೋಡೊಕೆ ಎಲ್ಲ ಕಡೆ ಜನಸಾಗರ. ವರ್ಷಕ್ಕೊಮ್ಮೆ ಮಾತ್ರ ಕಾಣಸಿಗುವ ಈ ಸಂಭ್ರಮವನ್ನು ಜನ ರೋಮಾಂಚನ ಮತ್ತು ಉತ್ಸಾಹದೊಂದಿಗೆ ವೀಕ್ಷಿಸುತ್ತಿದ್ದಾರೆ. ದೃಶ್ಯಗಳನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದುಕೊಳ್ಳುತ್ತಿದ್ದಾರೆ. ಅಭಿಮನ್ಯು ಎಡ ಮತ್ತು ಬಲಭಾಗಲ್ಲಿ ಅವನ ಹಾಗೆ ಸಿಂಗಾರಗೊಂಡಿರುವ ಕುಮ್ಕಿ ಆನೆಗಳು ಸಾಗಿವೆ. ಅವುಗಳ ಹಿಂದೆ ಮೋಟಾರ್ ಕೇಡ್ ಮತ್ತು ಅಶ್ವದಳ. ರಸ್ತೆಬದಿಯ ಕಟ್ಟಡ ಮತ್ತು ಮನೆಗಳ ಮೇಲೂ ಜನ. ರೋಮಾಂಚಿತ ಜನರ ಚೀತ್ಕಾರ, ಕೇಕೆ, ಕೂಗಾಟ ಮತ್ತು ಅರಚಾಟದಿಂದ ಅಭಿಮನ್ಯು ವಿಚಲಿತನಾಗಿಲ್ಲ. ಅದೇ ಗಾಂಭೀರ್ಯದ ನಡಿಗೆಯಿಂದ ಜನರಲ್ಲಿ ಮತ್ತಷ್ಟು ಉತ್ಸಾಹ ತುಂಬುತ್ತಿದ್ದಾನೆ.





