Mysore
24
clear sky

Social Media

ಶುಕ್ರವಾರ, 23 ಜನವರಿ 2026
Light
Dark

Mysuru Dasara | ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಅರಮನೆ ನಗರಿ 

ಮೈಸೂರು : ನಾಡಹಬ್ಬ ವಿಶ್ವವಿಖ್ಯಾತ ದಸರಾ ಮಹೋತ್ಸವ ಪ್ರಯುಕ್ತ ಅರಮನೆ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಝಗಮಗಿಸುವ ಮೂಲಕ ದೇಶ-ವಿದೇಶದ ಲಕ್ಷಾಂತರ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಪ್ರಮುಖ ವೃತ್ತ, ರಸ್ತೆಗಳಲ್ಲಿ ವಿಶಿಷ್ಠವಾಗಿ ಅಲಂಕಾರ ಮಾಡಿರುವುದರ ಜತೆಗೆ ಇಡೀ ಮೈಸೂರು ಸುತ್ತುವರಿದಂತೆ ದೀಪಾಲಂಕಾರ ಮಾಡಿರುವ ಹಿನ್ನೆಲೆಯಲ್ಲಿ ನೋಡುಗರನ್ನು ಮತ್ತೆ ಮತ್ತೆ ಕಣ್ಮನ ಸೆಳೆಯುತ್ತಿದೆ. ನಾಲ್ಕು ಭಾಗಗಳಿಂದ ನಗರಕ್ಕೆ ಹಾದು ಬರುವ ನಾಲ್ಕು ಮಾರ್ಗದ ರಸ್ತೆಯ ೧೪೬ ಕಿ.ಮೀ ರಸ್ತೆ ಅಲ್ಲದೆ ನಗರದ ೧೧೧೩ ವೃತ್ತವನ್ನುಬೆಳಕಿನ ಮಯ ಮಾಡಿರುವುದರಿಂದ ಸಂಜೆ ವೇಳೆ ನೋಡುವುದೇ ಒಂದು ಚೆಂದವಾಗಿದೆ. ಈ ಬಾರಿಯೂ ವಿಶೇಷವಾಗಿಹಲವು ಮಾದರಿಗಳನ್ನು ರೂಪಿಸಿ ದೀಪಾಲಂಕಾರದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ;ಮೈಸೂರು ದಸರಾಗೆ ಆಗಮಿಸುವ ನಾಡ ಜನತೆಗೆ ರೈಲ್ವೆ ಇಲಾಖೆಯಿಂದ ಬಿಗ್ ಗಿಫ್ಟ್

ದೇಶ ಮತ್ತು ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ದಸರಾ ಅಂಬಾರಿ, ಕೆಆರ್‌ಎಸ್ ಅಣೆಕಟ್ಟು, ಅಶೋಕ ಸ್ಥಂಭ, ನಡೆದಾಡುವ ದೇವರೆಂದೆ ಕರೆಸಿಕೊಂಡಿದ್ದ ಸಿದ್ಧಗಂಗಾಶ್ರೀ,ಬಸವಣ್ಣ, ಕನಕದಾಸ,ಅಂಬೇಡ್ಕರ್ ಮಾದರಿಗಳನ್ನು ಮಾಡಲಾಗಿದೆ.

ಪ್ರತಿಕೃತಿಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿ ನಗರದ ನಾನಾ ಕಡೆ ನಿರ್ಮಿಸಿದೆ. ಇದಲ್ಲದೇ ಎಂದಿನಂತೆ ಈ ಬಾರಿಯೂ ಚಾಮುಂಡೇಶ್ವರಿ ದೇವಿ, ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್, ಸಂಸತ್ ಭವನ, ವಿಧಾನಸೌಧ ಪ್ರತಿಕೃತಿಗಳನ್ನು ನಿರ್ಮಿಸಿರುವುದು ಗಮನ ಸೆಳೆದಿದೆ. ಈ ಮಾರ್ಗದಲ್ಲಿ ಸಂಜೆಯಾದ ಬಳಿಕ ಓಡಾಡುವ ಪ್ರವಾಸಿಗರು, ಸ್ಥಳೀಯರು, ಯುವಕ-ಯುವತಿಯರು ಕೆಲಹೊತ್ತು ನಿಂತು ವೀಕ್ಷಿಸುವ ಜತೆಗೆ,ಅದರ ಮುಂದೆ ಸೆಲ್ಛಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಾಣಬಹುದು. ಕಾಂಗ್ರೆಸ್ ಕಚೇರಿಯಲ್ಲಿ ಸಿಎಂ,ಡಿಸಿಎಂ,ಇಂಧನ ಸಚಿವರು,ಉಸ್ತುವಾರಿ ಸಚಿವರ ಭಾವಚಿತ್ರವನ್ನು ವಿದ್ಯುತ್‌ನಿಂದ ಕಂಗೊಳಿಸುವಂತೆ ಮಾಡಲಾಗಿದೆ.

Tags:
error: Content is protected !!