Mysore
24
haze

Social Media

ಶನಿವಾರ, 24 ಜನವರಿ 2026
Light
Dark

Mysuru Dasara | ಮೈಸೂರಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸ್‌ ಪಹರೆ

dasara (23)

ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇಂದು(ಸೆ.22) ವಿದ್ಯುಕ್ತ ಚಾಲನೆ ನೀಡಲಾಗಿದೆ. ಲೇಖಕಿ ಬಾನು ಮುಷ್ತಾಕ್‌ ಅವರು ನಾಡದೇವಿ ಚಾಮುಂಡಿಗೆ ಪುಷ್ಪರ್ಚನೆ ಮಾಡುವ ಮೂಲಕ ದಸರೆಯ ಉದ್ಘಾಟಿಸಿ ತಮ್ಮ ಭಾಷಣದುದ್ದಕ್ಕೂ ಸಾಮರಸ್ಯದ ಕುರಿತು ಹೇಳಿದ್ದಾರೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೈಸೂರು ನಗರ ಹಾಗೂ ಚಾಮುಂಡಿಬೆಟ್ಟಕ್ಕೆ ಪೊಲೀಸ್ ಪಹರೆ ಹಾಕಲಾಗಿತ್ತು. ಉದ್ಘಾಟನಾ ಸಮಾರಂಭಕ್ಕೆ ಈ ಬಾರಿ ಹಿಂದೆಂದೂ ಕಾಣದ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಪೊಲೀಸರು ಹೆಜ್ಜೆ ಹೆಜ್ಜೆಗೂ ನಿಯೋಜನೆಗೊಂಡಿದ್ದರು. ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಭದ್ರತೆಯ ನೇತೃತ್ವ ವಹಿಸಿದ್ದರು. ಅಲ್ಲದೆ ಪಾಸ್ ಇದ್ದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ಚಾಮುಂಡಿಬೆಟ್ಟಕ್ಕೆ ಬರಲು ಅವಕಾಶ ನೀಡಲಾಗಿತ್ತು. ಮಹಿಷಾಸುರ ಪ್ರತಿಮೆಯಿಂದ ಚಾಮುಂಡೇಶ್ವರಿ ದೇವಸ್ಥಾನದ ತನಕ ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಪಾಸ್ ಇದ್ದವರಿಗೆ, ವಿಐಪಿ, ಮಾಧ್ಯಮದವರಿಗೆ ಪ್ರತ್ಯೇಕ ಬ್ಯಾರಿಕೇಡ್ ಮಾರ್ಗವನ್ನು ನಿರ್ಮಿಸಲಾಗಿತ್ತು.

ಇದನ್ನು ಓದಿ: ದೇವಿ ಚಾಮುಂಡಿ ದ್ವೇಷ, ಅಸಹಿಷ್ಣುತೆಯನ್ನು ನಾಶ ಮಾಡಲಿ : ದಸರಾ ಉದ್ಘಾಟಕಿ ಬಾನು

ಎಲ್ಲೆಲ್ಲೂ ಪೊಲೀಸರ ಕಣ್ಗಾವಲು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ, ಚಾಮುಂಡಿ ಬೆಟ್ಟಕ್ಕೆ ತೆರಳುವ ಪ್ರವಾಸಿಗರ ತೀವ್ರ ತಪಾಸಣೆ ಮಾಡಿದರು. ವಿಐಪಿ ಮತ್ತು ವಿವಿಐಪಿ ಸಂಚಾರ ಇರುವ ಕಾರಣ ಬೈಕ್‌ಗಳನ್ನು ಸಹ ಬಿಡುತ್ತಿರಲಿಲ್ಲ. ದ್ವಿಚಕ್ರ ವಾಹನದಲ್ಲಿ ಬಂದ ಪ್ರವಾಸಿಗರ ಡಿಕ್ಕಿ, ಕಾರುಗಳ ಡಿಕ್ಕಿ ತೆಗೆದು ಪೊಲೀಸರು ಪರಿಶೀಲಿಸಿದರು. ಬೆಳಗಿನ ಉಪಹಾರವನ್ನೂ ತೆಗೆದುಕೊಂಡು ಹೋಗದಂತೆ ತಡೆದರು. ಉಪಹಾರವೂ ಒಳಗೆ ಬಿಡದಿದ್ದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಒಬ್ಬ ಡಿಸಿಪಿ, ಇಬ್ಬರು ಎಸಿಪಿ, ಸಂಚಾರಿ ಪೊಲೀಸರು, ಕೆಎಸ್‌ಆರ್‌ಪಿ ಮತ್ತು ಡಿಎಆರ್ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಸಲಾಗಿದೆ. ಮೂರು ಸಾವಿರ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ.

ಬಾನು ಮುಷ್ತಾಕ್‌ಗೆ ಬಿಗಿಭದ್ರತೆ
ಇನ್ನೂ ದಸರಾ ಉದ್ಘಾಟನೆಗೆ ಆಗಮಿಸಿರುವ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮಷ್ತಾಕ್ ಹಾಗೂ ಅವರ ಕುಟುಂಬದವರಿಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ. ಅವರು ವಾಸ್ತವ್ಯ ಹೂಡಿದ್ದ ಹೋಟೆಲ್‌ಗೂ ಪೊಲೀಸರ ಕಾವಲು ಹಾಕಲಾಗಿದೆ. ಬಾನು ಮುಷ್ತಾಕ್ ಅವರು ವೇದಿಕೆಯಲ್ಲಿ ಆಸೀನರಾಗಿದ್ದಾಗ ಮಹಿಳಾ ಪಿಎಸ್‌ಐ ಭದ್ರತೆಗೆ ನಿಯೋಜನೆಗೊಂಡಿದ್ದರು.

Tags:
error: Content is protected !!