Mysore
17
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

Mysuru dasara | ದಸರಾ ದೀಪಾಲಂಕಾರಕ್ಕೆ ತೆರೆ

ಮೈಸೂರು : ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ದೀಪಾಲಂಕಾರಕ್ಕೆ ಭಾನುವಾರ ಅದ್ದೂರಿ ತೆರೆ ಬಿದ್ದಿತ್ತು.

ದೇಶ-ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಪ್ರವಾಸಿಗರನ್ನು ಈ ಬಾರಿಯ ದಸರಾ ವಿದ್ಯುತ್ ದೀಪಾಲಂಕಾರ ಆಕರ್ಷಿಸಿತ್ತು. ಪ್ರತಿಬಾರಿಯಂತೆ ಈ ವರ್ಷವೂ ದೀಪಾಲಂಕಾರದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಗಮಿತ(ಸೆಸ್ಕ್) ಹಿಂದಿನ ವರ್ಷಕ್ಕಿಂತಲ್ಲೂ ಅತ್ಯಂತ ಆಕರ್ಷಣೀಯವಾಗಿ ದೀಪಾಲಂಕಾರವನ್ನು ಮಾಡುವಲ್ಲಿ ಯಶಸ್ವಿಯಾಗಿತ್ತು.

೧೩೬ ಕಿಮೀ ದೀಪಾಲಂಕಾರ
ದಸರಾ ಹಿನ್ನೆಲೆಯಲ್ಲಿ ಈ ಬಾರಿ ನಗರದ ೧೩೬ ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ ೧೧೮ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಇದರೊಂದಿಗೆ ನಗರದ ಪ್ರಮುಖ ಕಡೆಗಳಲ್ಲಿ ಎಲ್‌ಇಡಿ ಬಲ್ಬ್‌ಗಳಿಂದ ನಿರ್ಮಿಸಲಾದ ೮೦ ವಿವಿಧ ಪ್ರತಿಕೃತಿಗಳು ದೀಪಾಲಂಕಾರದ ಅಂದವನ್ನು ಹೆಚ್ಚು ಮಾಡುವುದರ ಜತೆಗೆ ನೋಡುಗರನ್ನು ಆಕರ್ಷಿಸಿತ್ತು. ಸೆ.೨೨ರಂದು ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ದೀಪಾಲಂಕಾರಕ್ಕೆ ವಿದ್ಯುತ್ ಚಾಲನೆಯನ್ನು ನೀಡಿದ್ದರು.

ಇದನ್ನು ಓದಿ: Mysuru Dasara | ದೀಪಾಲಂಕಾರ ಕಣ್ತುಂಬಿಕೊಂಡ ಜನಸಾಗರ

ಕೊಲ್ಕತ್ತಾ ಲೈಟಿಂಗ್ ಮೆರಗು
ದೀಪಾಲಂಕಾರದ ಆಕರ್ಷಣೆ ಹೆಚ್ಚಿಸುವ ಸಲುವಾಗಿ ಸೆಸ್ಕ್ ವತಿಯಿಂದ ಈ ಬಾರಿ ಸಾಕಷ್ಟು ಹೊಸತನದ ಪ್ರಯತ್ನಗಳನ್ನು ಮಾಡಲಾಗಿತ್ತು. ಅದರಂತೆ ಈ ಬಾರಿ ಕೊಲ್ಕತ್ತಾ ಮಾದರಿ ಲೈಟಿಂಗ್‌ಗಳನ್ನು ನಗರದ ಹಲವು ಕಡೆಗಳಲ್ಲಿ ಅಳವಡಿಸಲಾಗಿತ್ತು. ಇದರಿಂದಾಗಿ ನಗರದ ಹಲವು ಕಡೆಗಳಲ್ಲಿ ಬಣ್ಣಬಣ್ಣದ ದೀಪಗಳಿಂದ ಅಲಂಕೃತಗೊಂಡಿದ್ದ ರಸ್ತೆ ಹಾಗೂ ವೃತ್ತಗಳು ದಸರಾ ವಿದ್ಯುತ್ ದೀಪಾಲಂಕಾರದ ಮೆರಗು ಹೆಚ್ಚಿಸಿತ್ತು.

ಅಗತ್ಯ ಸುರಕ್ಷತಾ ಕ್ರಮ
ದಸರಾ ವಿದ್ಯುತ್ ದೀಪಾಲಂಕಾರದಲ್ಲಿ ಸೆಸ್ಕ್ ವತಿಯಿಂದ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ದೀಪಾಲಂಕಾರದ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳುವುದು, ಕಂಬಗಳ ಹತ್ತಿರ ನಿಂತು ಫೋಟೋ/ವಿಡಿಯೋ ಶೂಟ್ ಮಾಡುವುದನ್ನು ತಪ್ಪಿಸುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿತ್ತು.

ದೀಪಾಲಂಕಾರ ವೀಕ್ಷಿಸಿದ್ದ ಸಿಎಂ
ಸ್ಥಳೀಯರು, ಪ್ರವಾಸಿಗರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈ ಬಾರಿಯ ದಸರಾ ದೀಪಾಲಂಕಾರವನ್ನು ವೀಕ್ಷಿಸಿದರು. ಅಂಬಾರಿ ಬಸ್ಸಿನ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮುಖ್ಯಮಂತ್ರಿಗಳು ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಂಡರು. ಆ ಮೂಲಕವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಗಮಿತದ ಪ್ರಯತ್ನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

Tags:
error: Content is protected !!