ಮೈಸೂರು : ವಿವಿಧ ವಿಷಯ, ಭಾಷೆ ಹಾಗೂ ಸಾಹಿತ್ಯ ಪ್ರಕಾರಗಳನ್ನೊಳಗೊಂಡ ಪುಸಕ್ತಗಳು ಒಂದೇ ಸೂರಿನಡಿ ಅನಾವರಣಗೊಳ್ಳವ ದಸಾರ ಪುಸ್ತಕ ಮೇಳಕ್ಕೆ ಕನ್ನಡ ಮತ್ತು ಸಂಸ್ಕ ತಿ ಇಲಾಖೆಯ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಚಾಲನೆ ನೀಡಿದರು.
ದಸರಾ ಮಹೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕ ತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ನಗರದ ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಹಮ್ಮಿಕೊಂಡಿರುವ ಪುಸ್ತಕ ಮೇಳವನ್ನು ಸಚಿವರು ಉದ್ಘಾಟಿಸಿದರು.
ಬಾನು ಮುಸ್ತಾಕ್ ಬದುಕು ಬರಹ ಕೃತಿ ಬಿಡುಗಡೆ
ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಬಿ.ಶಿವಾನಂದ್ ಆವರು ರಚಿಸಿರುವ ‘ಬುಕರ್ ಬಾನು’ ಬಾನು ಮುಷ್ತಾಕರ ಬದುಕು ಬರಹ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್ ತಂಗಡಗಿ ಆವರು ಬಿಡುಗಡೆಗೊಳಿಸಿದರು.
ಇದನ್ನೂ ಓದಿ:-https://andolana.in/mysore-dasara-2025/mysuru-dasara-cm-inaugurates-the-dasara-wrestling-tournament/
ರಿಯಾಯಿತಿ:
ಪುಸ್ತಕ ಮೇಳದಲ್ಲಿ ಭಾಗವಹಿಸುವ ಪ್ರಕಾಶನಗಳು ವಿಶೇಷ ರಿಯಾಯಿತಿ ನೀಡಿವೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಸಾರದ ಪುಸ್ತಕಗಳಿಗೆ ೫೦% ರಿಯಾಯಿತಿ ನೀಡಿವೆ. ಶ್ರವಣ ಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಪ್ರಕಾಶನವು ೨೦% ರಿಯಾಯಿತಿ ನೀಡಿವೆ. ಅಲ್ಲದೆ ಉಳಿದ ಪ್ರಕಾಶನಗಳು ಅವರದೇ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ನೀಡುತ್ತೇವೆ. ರಾಜಕೀಯ ಆಸಕ್ತರಿಗೆ ನರೇಂದ್ರ ಮೋದಿ ಯಾರೂ ತುಳಿಯದ ಹಾದಿ, ಸದನದಲ್ಲಿ ಸಿದ್ಧರಾಮಯ್ಯ ಸೇರಿದಂತೆ , ಮಹಿಳೆಯರಿಗಾಗಿ ರುಚಿಕರ ವಿವಿಧ ಖಾದ್ಯಗಳನ್ನು ವಿವಿರಿಸುವ ಪುಸ್ತಕಗಳು, ಪುರಾಣ ಕಥೆಗಳು, ಮಕ್ಕಳ ಕಥೆಗಳು, ಸಾಮಾಜಿಕ ಕ್ರಾಂತಿ, ಗಾಂದಿಜೀ, ಅಂಬೇಡ್ಕರ್ ಮುಂತಾದ ಪುಸ್ತಕಗಳು ಸಾಹಿತ್ಯಕ್ತರನ್ನು ಕೈ ಬಿಸಿ ಕರೆಯುತ್ತಿವೆ.
93 ಮಳಿಗೆಗಳು
ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆಗಳು ದಸರಾ ಪುಸ್ತಕ ಮೇಳದಲ್ಲಿ ಭಾಗವಿಸಿವೆ. ಚೇತನ ಚಿತ್ತಾರ ಮೈಸೂರು, ಸ್ನೇಹ ಬುಕ್ ಹೌಸ್ ಮೈಸೂರು, ಅನುಷಾ ಬುಕ್ ಸ್ಟೋರ್ ಬೆಂಗಳೂರು, ಬುಕ್ಸ್ ಲೋಕ ಮೈಸೂರು, ಆರ್ಯ ಸಮಾಜ ನೇರಳೆ ಕಟ್ಟೆ ದಕ್ಷಿಣ ಕನ್ನಡ, ರೂಪಶ್ರೀ ಪ್ರಕಾಶನ ಮೈಸೂರು ಸೇರಿದಂತೆ 93 ಪ್ರಕಾಶನಗಳು ಮೇಳದಲ್ಲಿವೆ.





