ಮೈಸೂರು : ಬಾನಂಗಳದಲ್ಲಿ ಹಾರುವ ಲೋಹದ ಹಕ್ಕಿಗಳ ಸಾಹಸಮಯ ಪ್ರದರ್ಶನ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮತ್ತಷ್ಟು ಕಳೆ ತಂದಿದೆ.
ಗುರುವಾರ ಬನ್ನಿಮಂಟಪ(ಕವಾಯತು) ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈಮಾನಿಕ ಪ್ರದರ್ಶನದ ಪೂರ್ವಭ್ಯಾಸದ ರೋಮನಾಚರಣಕಾರಿ ಪ್ರದರ್ಶನವನ್ನು ಕಂಡು ಮೈಸೂರಿನ ಜನತೆ ಕುಣಿದು ಕುಪ್ಪಳಿಸಿದರು.
ಸಾರಂಗ ಕೇಂದ್ರ ವೈಮಾನಿಕ ಪ್ರದರ್ಶನದ 5 ಹೆಲಿಕ್ಯಾಪ್ಟರ್ ಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದು, ಮಿಂಚಿನ ರೀತಿ ಶರವೇಗದಲ್ಲಿ ಹಾರುವ ಪ್ರದರ್ಶನದ ಚಿತ್ತಾರವನ್ನು ಜನ ಕಣ್ತುಂಬಿಕೊಂಡರು.
ಇದನ್ನು ಓದಿ : ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಪಾರಂಪರಿಕ ಸೈಕಲ್ ಸವಾರಿ
ನೀಲಿ ಗಗನದಲ್ಲಿ ಓಲಾಡಿ- ತೇಲಾಡಿದ ಲೋಹದ ಹಕ್ಕಿಗಳು ಬಣ್ಣ ಬಣ್ಣದ ಹೊಗೆಯ ಮೂಲಕ ಹೃದಯ ಬಿಳಿ ಗೆರೆಗಳನ್ನು ಬರೆಯುವುದರ ಮೂಲಕ ರೋಮಾಂಚನಕಾರಿ ದೃಶ್ಯಕ್ಕೆ ಪಾತ್ರವಾದವು.
ಆಗಸದಲ್ಲಿ ಮೈನವಿರೇಳುವ ಮೈಮಾನಿಕ ಪ್ರದರ್ಶನವನ್ನು ಕಂಡು ಪ್ರೇಕ್ಷಕರು ಪುಳಕಿತಗೊಂಡರು. ಅನೇಕ ರೋಮಾಂಚನಕಾರಿ ಅನುಭವಕ್ಕೆ ಇಂದು ನಡೆದ ವೈಮಾನಿಕ ಪ್ರದರ್ಶನ ಸಾಕ್ಷಿಯಾದವು. ಬಾನಂಗಳಕ್ಕೆ ಹೇರಿ ನೆಲಕ್ಕೆ ರಪ್ಪನೆ ಬೀಳುವ ರೀತಿಯಲ್ಲಿ ಪ್ರದರ್ಶನ ನೀಡಿ ನೋಡುಗರನ್ನು ಅಚ್ಚರಿ ಗೊಳಿಸಿದವು.
ಪೂರ್ವಬ್ಯಾಸ ಪ್ರದರ್ಶನಕ್ಕೆ ಇಡೀ ಕವಾಯತು ಮೈದಾನ ಭರ್ತಿ ಆಗಿದ್ದು, ಸೆಪ್ಟೆಂಬರ್ 27 ರಂದು ಸಂಜೆ 5 ಗಂಟೆಗೆ ನಡೆಯುವ ವೈಮಾನಿಕ ಪ್ರದರ್ಶನಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳಲು ಮೈಸೂರಿನ ಜನತೆ ಕಾಯುತ್ತಿದ್ದಾರೆ, ಒಟ್ಟಾರೆ ಈ ಬಾರಿಯ ವೈಮಾನಿಕ ಪ್ರದರ್ಶನ ದಸರಾ ಮಹೋತ್ಸವಕ್ಕೆ ಇನ್ನಷ್ಟು ಮೆರುಗನ್ನು ತರಲಿದೆ.





