ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದ್ದು, ಅರಮನೆಯಲ್ಲಿ ಜಟ್ಟಿಕಾಳಗ ಮೈನವಿರೇಳಿಸಿತು.
ಅರಮನೆಯ ಸವಾರಿ ತೊಟ್ಟಿಯಲ್ಲಿ ನಡೆದ ಜಟ್ಟಿ ಕಾಳಗದಲ್ಲಿ ನಾಲ್ವರು ಜಟ್ಟಿಗಳು ಸೆಣಸಾಡಿದರು. ಮಂಜುನಾಥ್ ಬೆಂಗಳೂರಿನ ಪ್ರದ್ನುಮ್ನ, ಚಾಮರಾಜನಗರ ಮಹೇಶ್ ನಾರಾಯಣ ಜಟ್ಟಿ, ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ಕಾಳಗದಲ್ಲಿ ಸೆಣಸಾಡಿದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಜಟ್ಟಿ ಕಾಳಗವನ್ನು ನೋಡಿ ಕಣ್ತುಂಬಿಕೊಂಡರು. ಕಣದಲ್ಲಿ ಜಟ್ಟಿಗಳ ರಕ್ತ ಚೆಲ್ಲಿ ರಾಜಮನೆಯನಕ್ಕೆ ಜಟ್ಟಿಗಳು ತಮ್ಮ ನಿಷ್ಠೆ ಪ್ರದರ್ಶಿಸಿದರು.





