ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ.
ಇಂದು ನಡೆಯಲಿರುವ ಜಂಬೂಸವಾರಿ ಮೆರವಣಿಗೆ ಎಲ್ಲಾ ಸಿದ್ಧತೆಗಳು ನಡೆಯಲಿದುದ, ಅರಮನೆಯಲ್ಲಿ ಸಾಂಪ್ರದಾಯಿಕ ಪೂಜಾ ಪುನಸ್ಕಾರ ನಡೆಯುತ್ತಿದೆ.
ವಜ್ರಮುಷ್ಠಿ ಕಾಳಗ ನಡೆದ ಬಳಿಕ ಪಲ್ಲಕ್ಕಿಯೊಂದಿಗೆ ವಿಜಯಯಾತ್ರೆ ಆರಂಭಿಸಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಬನ್ನಿಮರಕ್ಕೆ ಪೂಜೆ ಸಲ್ಲಿಸಿದರು.
ಇದನ್ನು ಓದಿ: ಮೈಸೂರು ದಸರಾ: ಅರಮನೆಯಲ್ಲಿ ಜಟ್ಟಿ ಕಾಳಗ
ಸಾಂಪ್ರದಾರಿಕ ಉಡುಗೆಯೊಂದಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರಿನ ಅರಮನೆ ಆವರಣದಲ್ಲಿರುವ ಬನ್ನಿಮರದ ಬಳಿ ಆಗಮಿಸಿ ಅಲ್ಲಿ ವಿಜಯದಶಮಿ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದರು.
ಬನ್ನಿಮರಕ್ಕೆ ಪೂಜೆ ಸಲ್ಲಿಸಿದ ಬಳಿಕವೇ ಅರಮನೆಗೆ ತೆರಳಿ ಯದುವೀರ್ ಒಡೆಯರ್ ಅವರು ಕಂಕಣ ವಿಸರ್ಜನೆ ಮಾಡಲಿದ್ದಾರೆ.





