Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಜಂಬೂಸವಾರಿ ವೀಕ್ಷಿಸಲು ಬಂದಿದ್ದ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮೈಸೂರು : ಜಂಬೂಸವಾರಿ ಮೆರವಣಿಗೆ ವೀಕ್ಷಿಸುವ ಸಲುವಾಗಿ ವಿವಿಧ ಕಡೆಗಳಿಂದ ಆಗಮಿಸಿದ್ದವರಲ್ಲಿ ಹಸಿವಿನಿಂದ ಬಳಲಿ ಸುಸ್ತಾಗಿ ಅಸ್ವಸ್ಥಗೊಂಡಿದ್ದ ಕೆಲವರಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲಾಯಿತು.

ಇದನ್ನು ಓದಿ : Mysuru Dasara | ರೋಮಾಂಚಕ ಜಂಬೂ ಸವಾರಿ, ಸಂಭ್ರಮಿಸಿದ ಲಕ್ಷಾಂತರ ಜನ..

ನ್ಯೂ ಸಯ್ಯಾಜಿರಾವ್ ರಸ್ತೆಯ ಗುರುಸ್ವೀಟ್ಸ್, ಬಾಟಾ ಶೋರೂಂ, ಆಯುರ್ವೇದ ಆಸ್ಪತ್ರೆ ವೃತ್ತ, ಕೆ.ಆರ್.ವೃತ್ತ, ಬಂಬೂಬಜಾರ್ ಮಾರ್ಗದಲ್ಲಿ ಲಕ್ಷಾಂತರ ಜನರು ಜಂಬೂ ಸವಾರಿ ವೀಕ್ಷಿಸಲು ಕುಳಿತಿದ್ದರು. ಸ್ಥಳ ಅಭಾವ ಉಂಟಾಗಬಹುದೆಂಬ ಹಿನ್ನೆಲೆಯಲ್ಲಿ ಬಹಳ ಮುಂಚಿತವಾಗಿಯೇ ಆಗಮಿಸಿದ್ದರಿಂದ ಕೆಲವರು ಹಸಿವು ತಾಳಲಾರದೆ ಸುಸ್ತಾಗಿ ಬಳಲಿದ್ದರು. ಅಕ್ಕಪಕ್ಕದವರು ಸಂಬಂಧಿಸಿದವರಿಗೆ ವಿಚಾರ ಮುಟ್ಟಿಸಿದರು. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಆಂಬುಲೆನ್ಸ್ ಮೂಲಕ ಅವರನ್ನು ಸಕಾಲದಲ್ಲಿ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಟ್ಟರು.

Tags:
error: Content is protected !!