Mysore
25
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಜಾನಪದ ಕಲರವ

ಮೈಸೂರು: ದಸರಾ ಕವಿಗೋಷ್ಠಿಯಲ್ಲಿ ಇದೇ ಮೊದಲ ಬಾರಿಗೆ ವಿವಿಧ ಜನಪದಗಳ ಕಾವ್ಯವಾಚನ ಹಾಗೂ ಗಾಯನಕ್ಕೆ ವೇದಿಕೆ ಕಲ್ಪಿಸಿದ್ದು, ಪ್ರತಿಭಾ ಕವಿಗೋಷ್ಠಿಯಲ್ಲಿ ಇಂದು ಈ ನೆಲದ ಮಣ್ಣಿನ ಮಕ್ಕಳು ಕಟ್ಟಿದ ಜಾನಪದ, ಗೀಗಿಪದ, ಲಾವಣಿ ಪದ, ಸೋಬಾನೆ ಪದ, ಅಣಕುಪದ, ಪಾಡ್ದನಗಳ ಪದ ಪಾಕವೇ ಹರಿಯಿತು. ಗೋಷ್ಠಿಗೆ ಆಗಮಿಸಿದ್ದ ಜಾನಪದ ಆರಾಧಕರು ಇದರ ಸವಿ ಸವಿದು ಖುಷಿಪಟ್ಟರು.

ಇದನ್ನು ಓದಿ : ದಸರಾ ಡ್ರೋನ್ ಶೋ: ಅನಧಿಕೃತವಾಗಿ ಡ್ರೋನ್ ವಿಡಿಯೋ ಚಿತ್ರೀಕರಣ ಮಾಡುವವರ ವಿರುದ್ಧ ಕ್ರಮ

ದಸರಾ ಮಹೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆಯುತ್ತಿರುವ ಪಂಚ ಕಾವ್ಯದೌತಣ ಕವಿಗೋಷ್ಠಿಯಲ್ಲಿ ನಾಲ್ಕನೇ ದಿನವಾದ ಇಂದು ಜರುಗಿದ ಪ್ರತಿಭಾ ಕವಿಗೋಷ್ಟಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 16 ವಿವಿಧ ಜನಪದ ಕಾವ್ಯವಾಚಕರು ಹಾಗೂ ಗಾಯಕರು ಕಂಸಾಳೆ, ತಂಬೂರಿ, ತಾಳ, ಮದ್ದಳೆಗಳ ಸಂಗೀತದೊಂದಿಗೆ ಸರಸ-ಸಲ್ಲಾಪ, ಬಸುರಿ ಬಯಕೆ, ಜರಿವ ಪದ, ಒಗಟು ಪದ, ತುಳುನಾಡಿನ ದೈವ ಪದ, ಮಲೆ ಮಾದಪ್ಪ, ಬಿಳಿಗಿರಿರಂಗಪ್ಪನ ಮೇಲಿನ ಪದಗಳ ಜನಪದದ ವಿವಿಧ ಪ್ರಕಾರಗಳ ಗಾಯನಕ್ಕೆ ನೆರೆದಿದ್ದವರು ಕುಳಿತಲ್ಲೆ ತಲೆದೂಗಿದರು.

ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿರುವ ಪ್ರೊ.ಡಿ.ಕೆ.ರಾಜೇಂದ್ರ, ಮುಖ್ಯ ಅತಿಥಿಗಳಾದ ಪ್ರೊ. ಶೈಲಜಾ ಹಿರೇಮಠ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಕವಿಗೋಷ್ಟಿಯ ಉಪಸಮಿತಿಯ ಕಾರ್ಯದರ್ಶಿ ಪ್ರೊ.ಎನ್.ಕೆ.ಲೋಲಾಕ್ಷಿ, ಕಾರ್ಯದರ್ಶಿಗಳಾದ ಚೇತನ್ ಕುಮಾರ್, ಅಧಿಕಾರೇತರ ಸಮಿತಿಯ ಅಧ್ಯಕ್ಷರಾದ ಸುರೇಶ್, ಉಪಾಧ್ಯಕ್ಷ ರಾದ ಮನೋನ್ಮಣಿ ಹಾಗೂ ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು.

Tags:
error: Content is protected !!