Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಶ್ವಾನ ಪ್ರದರ್ಶನ : ಜರ್ಮನ್ ಶಫರ್ಡ್‌ಗೆ ಮೊದಲ ಸ್ಥಾನ

ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆದ ಶ್ವಾನ ಮತ್ತು ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ಜರ್ಮನ್ ಶಫರ್ಡ್ ತಳಿಯ ಮೈಸೂರು ಶ್ವಾನಕ್ಕೆ ಮೊದಲ ಸ್ಥಾನ ದೊರೆಯಿತು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ನಗರದ ಜೆ.ಕೆ.ಮೈದಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ವಾನ ಮತ್ತು ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು.

ಮೈಸೂರು, ಮಂಡ್ಯ, ಬೆಂಗಳೂರು, ಹೊರ ರಾಜ್ಯ ಕೇರಳ ಹಾಗೂ ಊಟಿ ಸೇರಿದಂತೆ ವಿವಿಧ ಭಾಗಗಳಿಂದ ಒಟ್ಟು 640 ಶ್ವಾನಗಳು ನೋಂದಣಿಯಾಗಿದ್ದವು. ಸೈಬಿರಿಯಾ ಹಷ್ಕಿ, ಜರ್ಮನ್ ಶಫರ್ಡ್ , ಮುಧೋಳ ಹಾಗೂ ಪಾರಿನ್ ನ ಒಟ್ಟು 51 ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಲೊಂಡಿದ್ದವು ಅಂತಿಮವಾಗಿ 7 ತಳಿಗಳು ಜಯಶೀಲ ಆದವು ಅವುಗಳ ಮಾಲೀಕರಿಗೆ ಪ್ರಮಾಣ ಪತ್ರ ಹಾಗೂ ಆಕರ್ಷಕ ಟ್ರೋಪಿಯನ್ನು ನೀಡಲಾಯಿತು.

ಇದನ್ನೂ ಓದಿ:-ಮೈಸೂರು | ಸಮೀಕ್ಷೆಗೆ ಗೈರು ; 8 ಸಹ ಶಿಕ್ಷಕರು ಅಮಾನತು

ಶ್ವಾನಗಳ ನಡಿಗೆ, ಚರ್ಮದ ಬಣ್ಣ ಹಾಗೂ ಗುಣ ಲಕ್ಷಣಗಳನ್ನು ಆಧರಿಸಿ ತೀರ್ಪುಗಾರರಾದ ಡಾ. ಅಜೀಂ ಹುಲ್ಲಾ, ಡಾ.ಕೆ.ಟಿ.ಪರಮೇಶ್ವರ್, ಡಾ.ಬಸವರಾಜು ಹಾಗೂ ಡಾ.ಭಟ್ ಅವರು ಜಯಶೀಲ ತಳಿಗಳ ಹೆಸರನ್ನು ಘೋಷಿಸಿದರು.

ಜರ್ಮನ್ ಶಫರ್ಡ್ ತಳಿಗೆ ಮೊದಲ, ಬಾಕ್ಸರ್ ತಳಿಗೆ ದ್ವೀತೀಯ, ರಾಟ್ ವಲರ್ ತಳಿಗೆ ಮೂರನೇ, ಡಾಬರ್ ವೆಲಸ್ ನಾಲ್ಕನೆ, ಮಾಲ್ವಿಸ್ ತಳಿಗೆ ಐದನೇ, ಮುಧೋಳ್ ತಳಿಗೆ ಆರನೇ ಹಾಗೂ ಸೈಬೇರಿಯನ್ ಹಸ್ಕಿ ತಳಿಗೆ ಏಳನೇ ಸ್ಥಾನಗಳು ದೊರೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಅಭಿವೃದ್ಧಿ) ಭೀಮಪ್ಪ ಕೆ. ಲಾಳಿ ಅವರು, ಪಶುಪಾಲನ ಮತ್ತು ಪಶು ವೈದ್ಯಕೀಯ ಉಪನಿರ್ದೇಶಕರು (ಆಡಳಿತ) ಡಾ.ನಾಗರಾಜು ಅವರು, ಉಪನಿರ್ದೇಶಕರು (ಪಾಲಿ ಕ್ಲಿನಿಕ್) ಡಾ.ರಮೇಶ್ ಅವರು, ಸಹಾಯಕ ನಿರ್ದೇಶಕರಾದ ಡಾ.ಪೂರ್ಣನಂದ ಸೇರಿದಂತೆ ಇತರರು ಇದ್ದರು.

Tags:
error: Content is protected !!