ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮುನ್ನುಡಿಯಂತೆ ನಾಳೆಯಿಂದ ಯುವ ಸಂಭ್ರಮ ಆರಂಭವಾಗಲಿದೆ.
ಮಾನಸಗಂಗೋತ್ರಿಯ ಬಯಲು ರಂಗಮಂದಿರಲ್ಲಿ ನಾಳೆಯಿಂದ ಸೆಪ್ಟೆಂಬರ್.17ರವರೆಗೆ ಯುವ ಸಂಭ್ರಮ ನಡೆಯಲಿದೆ.
14 ವಿಶಿಷ್ಟ ವಸ್ತು ವಿಷಯಗಳಡಿ ರಾಜ್ಯದ ವಿವಿಧ ಕಾಲೇಜಿನ ಸುಮಾರು 400ರಿಂದ 500 ತಂಡಗಳು ಭಾಗಿಯಾಗಲಿವೆ.
ನಾಳೆ ಸಂಜೆ 5 ಗಂಟೆಗೆ ಯುವ ಸಂಭ್ರಮ ಉದ್ಘಾಟನೆಯಾಗಲಿದ್ದು, ಕನ್ನಡ ಚಿತ್ರರಂಗದ ನಟ-ನಟಿಯರು ಭಾಗಿಯಾಗಲಿದ್ದಾರೆ.





