Mysore
24
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ರಂಗೇರಿದ ಮೈಸೂರು ದಸರಾ ಮಹೋತ್ಸವ: ಗಜಪಡೆಗೆ ಮೊದಲು ಸಿಡಿಮದ್ದು ತಾಲೀಮು

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ದಸರಾ ಗಜಪಡೆ ಹಾಗೂ ಅಶ್ವರೋಹಿ ಪಡೆಗಳಿಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಯಿತು.

ದಸರಾ ವಸ್ತು ಪ್ರದರ್ಶನ ಮೈದಾನದ ವಾಹನಗಳ ನಿಲುಗಡೆ ಸ್ಥಳದಲ್ಲಿ ನಡೆದ ಸಿಡಿಮದ್ದು ತಾಲೀಮಿನಲ್ಲಿ ಎಲ್ಲಾ 14 ಆನೆಗಳು, ಅಶ್ವರೋಹಿ ದಳ ಭಾಗಿಯಾಗಿದ್ದವು.

ಮೊದಲಿಗೆ ವಸ್ತು ಪ್ರದರ್ಶನ ಮೈದಾನಕ್ಕೆ ಆಗಮಿಸಿದ ಗಜಪಡೆಗೆ ಪೂರ್ಣಕುಂಭ ಸ್ವಾಗತದ ಮೂಲಕ ವಸ್ತು ಪ್ರದರ್ಶನ ಪ್ರಾಧಿಕಾರವು ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡಿತು. ಬಳಿಕ ದಸರಾ ಗಜಪಡೆ ಹಾಗೂ ಅಶ್ವರೋಹಿ ದಳ ಸಿಡಿಮದ್ದು ತಾಲೀಮಿನಲ್ಲಿ ಭಾಗಿಯಾಗಿದ್ದವು.

ಇದನ್ನು ಓದಿ: ದಸರಾ ದೀಪಾಲಂಕಾರ, ಡ್ರೋನ್ ಶೋ ಪೋಸ್ಟರ್ ಬಿಡುಗಡೆ

ಇನ್ನು ಇದೇ ಮೊದಲ ಬಾರಿಗೆ ಸಿಡಿಮದ್ದು ತಾಲೀಮಿನಲ್ಲಿ ಭಾಗವಹಿಸಿದ್ದ ಹೇಮಾವತಿ, ರೂಪ ಮತ್ತು ಶ್ರೀಕಂಠ ಆನೆಗಳು ಸಿಡಿಮದ್ದಿನ ಸದ್ದಿಗೆ ಕೊಂಚ ಬೆದರಿದವು.

ಸಿಡಿಮದ್ದು ತಾಲೀಮು ಫೈರಿಂಗ್ ಕಾರ್ಯದಲ್ಲಿ ಸುಮಾರು 30ಕ್ಕೂ ಹೆಚ್ಚು ಸಿಎಆರ್ ಪೊಲೀಸರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಬಿಂದುಮಣಿ, ಸುಂದರರಾಜ್, ಡಿಸಿಎಫ್ ಪ್ರಭುಗೌಡ ಸೇರಿದಂತೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.

Tags:
error: Content is protected !!