Mysore
23
mist

Social Media

ಶುಕ್ರವಾರ, 02 ಜನವರಿ 2026
Light
Dark

ಮೈಸೂರು ದಸರಾಗೆ ಆಗಮಿಸುವ ನಾಡ ಜನತೆಗೆ ರೈಲ್ವೆ ಇಲಾಖೆಯಿಂದ ಬಿಗ್ ಗಿಫ್ಟ್

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾಗೆ ಆಗಮಿಸುವ ನಾಡ ಜನತಗೆ ರೈಲ್ವೆ ಇಲಾಖೆಯಿಂದ ಬಿಗ್‌ ಗಿಫ್ಟ್‌ ನೀಡಲಾಗಿದೆ.

ಮೈಸೂರು ದಸರಾ ಮಹೋತ್ಸವವನ್ನು ನೋಡಲು ರಾಜ್ಯ ಹಾಗೂ ಹೊರ ರಾಜ್ಯದಿಂದ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರಿಗೆ ಬರುವವರಿಗೆ 51 ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಎಂದಿನಂತೆ ಸಂಚರಿಸುವ ರೈಲುಗಳಿಗಿಂತ 51 ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.

ರೈಲ್ವೆ ಇಲಾಖೆ 11 ಅನ್ ರಿಸರ್ವ್ಡ್ ಟ್ರೈನ್‌ಗಳ ವ್ಯವಸ್ಥೆ ಮಾಡಿದ್ದು, ಜನಸಂದಣಿಯ ಅವಶ್ಯಕತೆಗೆ ತಕ್ಕಂತೆ ಬೋಗಿಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನು ಓದಿ : Mysuru dasara | ಮೈಸೂರಿಗೆ 610 ವಿಶೇಷ ಬಸ್ ; ದಿನದ ಪ್ರವಾಸಕ್ಕೆ ವಿಶೇಷ ಪ್ಯಾಕೇಜ್‌

ವಿಜಯಪುರ, ಶಿವಮೊಗ್ಗ, ಧಾರವಾಡ, ಚಾಮರಾಜನಗರ ಹಾಗೂ ತಮಿಳುನಾಡು, ಮಡಗಾಂವ್, ರಾಮನಾಥಪುರಂದಿಂದ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರ ದರ ಹಾಗೂ ಸಮಯವನ್ನು ಪ್ರತಿ ರೈಲ್ವೆ ನಿಲ್ದಾಣದಲ್ಲಿ ಹಾಕಲಾಗಿರುತ್ತದೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಆರೋಗ್ಯದಲ್ಲಿ ಸಮಸ್ಯೆಯಾದ್ರೆ ಪ್ಲಾಟ್ ಫಾಮ್ 1ರಲ್ಲಿ ಪ್ರತ್ಯೇಕ ಕ್ಲಿನಿಕ್ ವ್ಯವಸ್ಥೆ ಕಲ್ಪಿಸಲಾಗಿದೆ.

ರೈಲ್ವೆ ನಿಲ್ದಾಣದಲ್ಲಿ 150 ಜಿ.ಆರ್.ಪಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, 50 ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಈ ಕುರಿತು ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಗಿರೀಶ ಧರ್ಮರಾಜ ಕಲಗೊಂಡ ಮಾಹಿತಿ ನೀಡಿದ್ದಾರೆ.

Tags:
error: Content is protected !!