ಮೈಸೂರು: ಅಭಿಮನ್ಯು ಅರಣ್ಯ ಇಲಾಖೆ ಕಿರಿಟಾ ಇದ್ದಂತೆ ಎಂದುಡಿಸಿಎಫ್ ಪ್ರಭುಗೌಡ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ದಸರಾ ಆನೆ ಅಭಿಮನ್ಯು,ಸೇರಿದಂತೆ 13 ಆನೆಗಳು ಫಿಟ್ ಅಂಡ್ ಫೈನ್ ಆಗಿವೆ. ಆನೆಗಳಿಗೆ ಗದ್ದಲದ ಕಡೆ ಗಮನ ಹೋಗದಂತೆ ಮಾರ್ಗದುದ್ದಕ್ಕು ಅಹಾರ ಕ್ಯಾರಿ ಮಾಡಲಾಗುತ್ತದೆ. ದಸರಾದಲ್ಲಿ ಆನೆಗಳ ಬಗ್ಗೆ ಯಾವುದೇ ಆತಂಕ ಇಲ್ಲ. ಜನರು ಕೂಡ ಯಾವುದೆ ಗೊಂದಲಕ್ಕೆ ಒಳಗಾಗದೆ ದಸರಾ ನೋಡಿ ಎಂದು ಮನವಿ ಮಾಡಿದರು.





