ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಂದ ಬೃಹತ್ ಕೇಕ್ ಶೋ ಆಯೋಜನೆ ಮಾಡಲಾಗಿದೆ.
ನಗರದ ಅರಸು ಬೋರ್ಡಿಂಗ್ ಶಾಲೆ ಆವರಣದಲ್ಲಿ ಕೇಕ್ ಶೋ ಆಯೋಜನೆ ಮಾಡಲಾಗಿದ್ದು, ನಟಿ ರಚಿತಾ ರಾಮ್ ಬೃಹತ್ ಕೇಕ್ ಶೋ ಉದ್ಘಾಟನೆ ಮಾಡಿದರು.
ಮೈಸೂರು ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಆರ್‌ಎಸ್ ಆಣೆಕಟ್ಟು, ಹೆಚ್ಎಎಲ್ ಕಟ್ಟಡ, ಭಾರತೀಯ ಸೇನೆಯ ವಿಮಾನಗಳು, ದೊಡ್ಡ ಗಡಿಯಾರ, ತಬಲ, ಆರ್ಮೋನಿಯಂ ಪೆಟ್ಟಿಗೆ, ಕೊಳಲು, ಜಗತ್ಪ್ರಸಿದ್ಧ ಜಂಬೂಸವಾರಿ, ಐಪಿಎಲ್ ಟ್ರೋಫಿ, ಹುಲಿ, ಕರಡಿ, ಜಿಂಕೆ ಜಿರಾಫೆ ಆಕೃತಿಗಳು ಕೇಕ್‌ನಲ್ಲಿ ಮೂಡಿಬಂದಿವೆ.
ಕಲಾವಿದ ಲೆನಿನ್ ಕೈ ಚಳಕದಲ್ಲಿ ಅರಮನೆ, ಕೆಆರ್‌ಎಸ್ ಆಣೆಕಟ್ಟು ಮೂಡಿ ಬಂದಿದ್ದು, ಕೇಕ್ ಶೋ ಪ್ರವಾಸಿಗರನ್ನ ಸೆಳೆಯುತ್ತಿದೆ.





