Mysore
21
broken clouds

Social Media

ಗುರುವಾರ, 10 ಅಕ್ಟೋಬರ್ 2024
Light
Dark

ನಮ್ಮ ಮೈಸೂರ ದಸರಾ 2024: ಈ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಬೇಡಿ

ವಿಶ್ವವಿಖ್ಯಾತ ಮೈಸೂರು ದಸರಾ ನಾಳೆಯಿಂದ ( ಅಕ್ಟೋಬರ್‌ 3 ) ಆರಂಭವಾಗುತ್ತಿದ್ದು, ಪೊಲೀಸ್‌ ಇಲಾಖೆ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಮತ್ತು ದಸರಾ ಕಾರ್ಯಕ್ರಮಗಳು ಅಡ್ಡಿಯಿಲ್ಲದೇ ನಡೆಯಲು ಸಂಚಾರಿ ಮಾರ್ಗಗಳಲ್ಲಿ ಕೆಲ ಬದಲಾವಣೆಯನ್ನು ಮಾಡಿಕೊಂಡಿದೆ. ಅದರಂತೆ ವಾಹನ ನಿಲುಗಡೆ ವಿಷಯದಲ್ಲಿಯೂ ಸಹ ಕೆಲ ನಿಯಮಗಳನ್ನು ವಿಧಿಸಿದೆ.

ಪ್ರತಿ ದಿನ ಮಧ್ಯಾಹ್ನ 4ರಿಂದ ರಾತ್ರಿ 12ರವರೆಗೆ ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ

* ಎಸ್. ಆರ್. ರಸ್ತೆಯಲ್ಲಿ ಕೆ. ಆರ್. ವೃತ್ತದಿಂದ ಬಸವೇಶ್ವರ ವೃತ್ತದವರೆಗೆ
* ಪುರಂದರ ರಸ್ತೆಯಲ್ಲಿ ನಗರಪಾಲಿಕೆ ವೃತ್ತದಿಂದ ಬಿ. ಎನ್. ರಸ್ತೆ ಜಂಕ್ಷನ್‌ವರೆಗೆ
* ಬಿ. ಎನ್. ರಸ್ತೆಯಲ್ಲಿ ಜೆ. ಎಸ್. ಎಸ್. ವೃತ್ತದಿಂದ ಹಾರ್ಡಿಂಜ್ ವೃತ್ತದವರೆಗೆ
* ಎ. ವಿ. ರಸ್ತೆಯಲ್ಲಿ ಹಾರ್ಡಿಂಜ್ ವೃತ್ತದಿಂದ ಕೆ. ಆರ್. ವೃತ್ತದವರೆಗೆ
* ಅಶೋಕ ರಸ್ತೆಯಲ್ಲಿ ನೆಹರು ವೃತ್ತದಿಂದ ಮಹಾವೀರ ವೃತ್ತದವರೆಗೆ ?
* ಅಶೋಕ ರಸ್ತೆಯಲ್ಲಿ ಮಹಾವೀರ ವೃತ್ತದಿಂದ ಜಯಚಾಮರಾಜ ವೃತ್ತದವರೆಗೆ ಹಾಗೂ ಬಲರಾಮ ದ್ವಾರದ ಮುಂಭಾಗ ಇರುವ ಖಾಲಿ ಸ್ಥಳ ಸೇರಿದಂತೆ
* ಫೌಂಟೇನ್ ವೃತ್ತದಿಂದ ಮಿಲೇನಿಯಂ ವೃತ್ತದವರೆಗೆ
* ವಸ್ತು ಪ್ರರ್ದಶನದ ಮುಂಭಾಗದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬಿಎನ್ ರಸ್ತೆ ಜಂಕ್ಷನ್‌ನಿಂದ ಶಾಲಿವಾಹನ (ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‌ವರೆಗೆ.
* ಇಟ್ಟಿಗೆಗೂಡಿನ ಹೊಸ ಬೀದಿ ೫ನೇ ತಿರುವು ರಸ್ತೆಯಲ್ಲಿ ಶಾಲಿವಾಹನ (ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‌ನಿಂದ ವಸ್ತು ಪ್ರರ್ದಶನದ ಪೂರ್ವ ದ್ವಾರದವರೆಗೆ.
* ಮಾನಸರ ರಸ್ತೆಯಲ್ಲಿ ವಾಣಿ ವಿಲಾಸ ರಸ್ತೆ ಜಂಕ್ಷನ್ ನಿಂದ ಲೋಕರಂಜನ್ ಮಹಲ್ ರಸ್ತೆ ಜಂಕ್ಷನ್‌ವರೆಗೆ
* ಮಲೈಮಹದೇಶ್ವರ ರಸ್ತೆಯಲ್ಲಿ ಬಿ. ಎನ್. ರಸ್ತೆ ಜಂಕ್ಷನ್‌ನಿಂದ (ಛತ್ರಿಮರ) ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ
* ಸರ್ಕಾರಿ ಭವನದ ರಸ್ತೆಯಲ್ಲಿ, ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್‌ನಿಂದ ದಕ್ಷಿಣಕ್ಕೆ ಹಾರ್ಡಿಂಜ್ ವೃತ್ತದವರೆಗೆ.

* ಅ. 12ರಂದು ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆಯವರೆಗೆ ದಸರಾ ಮೆರವಣಿಗೆಯು ಸಾಗುವ ಮಾರ್ಗದಲ್ಲಿ ಬಲರಾಮ ದ್ವಾರ ಎ. ವಿ. ರಸ್ತೆ, ಕೆ. ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಬಂಬೂಬಜಾರ್, ಹೈವೇ ಹೋಟೆಲ್ ವೃತ್ತ ನೆಲ್ಸನ್ ಮಂಡೇಲಾ ರಸ್ತೆ ಬನ್ನಿಮಂಟಪದ ಮುಖ್ಯದ್ವಾರ ಮಿಲೇನಿಯಂ ವೃತ್ತದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.

Tags: