ಮೈಸೂರು: ಮನೆಯ ಬಾಲ್ಕನಿಯಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮಂಡಿಮೊಹಲ್ಲಾದಲ್ಲಿ ನಡೆದಿದೆ.
ಮಂಡಿಮೊಹಲ್ಲಾದಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಈ ಘಟನೆ ನಡೆದಿದ್ದು, 20 ವರ್ಷದ ಅನಿಕಾ ಇಲಾಯಿ ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ.
ಕಳೆದ ತಡರಾತ್ರಿ ಬಾಲ್ಕನಿಯಲ್ಲಿ ಓಡಾಡುತ್ತಾ ಓದುತ್ತಿದ್ದ ಅನಿಕಾ, ಇಂದು ಬೆಳಿಗ್ಗೆ ನೋಡಿದಾಗ ಬಾಲ್ಕಿನಿ ಕೆಳಗೆ ಯುವತಿಯ ಮೃತದೇಹ ಪತ್ತೆಯಾಗಿದೆ.
ಅನಿಕಾ ಅವರ ಕುಟುಂಟ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿ ವಾಸವಿದ್ದರು. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





