ಮೈಸೂರು: ಕಾರ್ಯಕರ್ತರಿಗೆ ಅವರ ನಾಯಕರಿಗೆ ಅಧಿಕಾರ ಸಿಗಬೇಕೆಂಬ ಆಸೆಯಂತೂ ಇದ್ದೇ ಇರುತ್ತದೆ. ಶೀಘ್ರವೇ ಅವರ ಆಸೆ ಈಡೇರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ತನ್ವೀರ್ ಸೇಠ್ ಹೇಳಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷದಲ್ಲಿ ನಮ್ಮ ನಾಯಕರಿಗೆ ಅಧಿಕಾರ ಸಿಕ್ಕಿಲ್ಲ ಎಂಬ ಬೇಸರ ಕಾರ್ಯಕರ್ತರಲ್ಲಿ ಇದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಪರಿಶ್ರಮ ಸಾಕಷ್ಟಿದೆ. ಅವರಿಗೆ ಅವಕಾಶ ಸಿಗದಿರುವ ಬಗ್ಗೆ ಪಕ್ಷದಲ್ಲಿ ಬೇಸರ ಇರುವುದು ನಿಜ. ಆದರೆ, ಈ ಬಗ್ಗೆ ಸೂಕ್ತ ಸಂಧರ್ಭದಲ್ಲಿ ನಿರ್ಧಾರ ಆಗಲಿದೆ ಎಂದರು.
ಶಾಸಕರಿಗೆ ಸಚಿವರಾಗುವ ಆಸೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಕಾರ್ಯಕರ್ತರಿಗಂತೂ ಆ ಆಸೆ ಇದೆ. ನಮ್ಮ ನಾಯಕರು ಮಂತ್ರಿ ಆಗಬೇಕು ಎಂಬ ಆಸೆ ಇರುತ್ತದೆ. ಶೀಘ್ರದಲ್ಲೇ ಪಕ್ಷದ ಕಾರ್ಯಕರ್ತರ ಆಸೆ ನೆರವೇರಲಿದೆ ಎಂದು ಹೇಳಿದರು.
ಹೊಸಕೋಟೆಯಲ್ಲಿ ಸಾವಿರಾರು ಮಂದಿಗೆ ಹಕ್ಕುಪತ್ರ ನೀಡುವ ಮೂಲಕ ಅರ್ಥಪೂರ್ಣವಾಗಿ ಯಶಸ್ವಿ ಸಮಾವೇಶ ನಡೆಸಲು ವ್ಯವಸ್ಥೆ ಮಾಡಲಾಗಿದೆ ಎಂದರು.