Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ನಾವೇನು ಕದ್ದು ಮುಚ್ಚಿ ಆರ್‌ಎಸ್‌ಎಸ್‌ ಶಾಖೆ ನಡೆಸುತ್ತಿಲ್ಲ: ಶಾಸಕ ಶ್ರೀವತ್ಸ

bjp mla t s shrivatsa speaked about caste census

ಮೈಸೂರು: ನಾವು ಬಾಬಾ ಸಾಹೇಬ್‌ ಡಾ.ಬಿ.ಆರ್.‌ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಆರ್‌ಎಸ್‌ಎಸ್‌ ಶಾಖೆ ನಡೆಸುತ್ತಿದ್ದೇವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ.

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್ಎಸ್‌ ಚಟುವಟಿಕೆಗೆ ನಿರ್ಬಂಧ ಹೇರುವಂತೆ ಒತ್ತಾಯಿಸಿ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶ್ರೀವತ್ಸ ಅವರು, ಇದು ಮೂರ್ಖತನದ ಪರಮಾವಧಿ. ನಾವೇನು ಕದ್ದು ಮುಚ್ಚಿ ಶಾಖೆ ನಡೆಸುತ್ತಿಲ್ಲ. ಬನ್ನಿ ನಮ್ಮ ಜೊತೆ ಕೂತು ಆರ್‌ಎಸ್‌ಎಸ್ ಹೇಗೆ ಕೆಲಸ ಮಾಡುತ್ತಿದೆ ನೋಡಿ ಎಂದು ಆಹ್ವಾನಿಸಿದರು.

ಇನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನಡುವೆ ವಾರ್ ನಡೆಯುತ್ತಿದೆ. ಈ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಮಾಡ್ತಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿದ್ದವು. ಈಗ ಒಂದು ಹೆಜ್ಜೆ ಮುಂದೆ ಹೋಗಿ ನಾನೇ ಸಿಎಂ ಎಂದು ಬಿಂಬಿಸಿಕೊಳ್ಳಲು ನೋಡ್ತಿದ್ದಾರೆ. ನಿಮ್ಮ ಅಧಿಕಾರ ಕೇವಲ ಇನ್ನೂ ಎರಡೂವರೆ ವರ್ಷ ಅಷ್ಟೇ. ಮತ್ತೆ ನಾವೇ ಅಧಿಕಾರಕ್ಕೆ ಬರ್ತೀವಿ .

ಇದನ್ನು ಓದಿ : ಪ್ರಿಯಾಂಕ್ ಖರ್ಗೆ ಎಮ್ಮೆ ಮೇಲೆ ಮಳೆ ಬಂದಂತೆ ಆಡ್ತಾರೆ: ಮಾಜಿ ಸಂಸದ ಪ್ರತಾಪ್‌ ಸಿಂಹ

ನಾವು ಸದನಕ್ಕೆ ಅದೇ ಡ್ರೆಸ್‌ನಲ್ಲಿ ಬರ್ತೀವಿ ಏನು ಮಾಡ್ತೀರಾ? ನಾವು ಅಂಬೇಡ್ಕರ್ ವಿಚಾರಧಾರೆ ಅಳವಡಿಸಿಕೊಂಡು ಶಾಖೆ ನಡೆಸುತ್ತಿದ್ದೇವೆ. ನಾವು ಮಕ್ಕಳಿಗೆ ಚರಿತ್ರೆ ಹೇಳಿ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಡಿಕೆಶಿ ಅಂದು ಸದನದಲ್ಲಿ ನಮಸ್ತೆ ಸದಾ ವತ್ಸಲೆ ಎಂದು ಹೇಳಿದ್ದರು. ಅದನ್ನು ಮುಚ್ಚಿಕೊಳ್ಳಲು ನಿನ್ನೆ ಕರಿಟೋಪಿ ಅಂತಿದ್ದಾರೆ. ಯಾರು ಏನು ಹೇಳಿದ್ರು ನಾವು ತಲೆಕೆಡಿಸಿಕೊಳ್ಳಲ್ಲ. ಡಿಕೆಶಿ ಹೇಳಿಕೆಯನ್ನು ಎಲ್ಲರೂ ನೋಡುತ್ತಿದ್ದಾರೆ. ನಾನು ಕೂಡ ಸಂಘದ ಒಬ್ಬ ಸದಸ್ಯ. ನಮ್ಮ ಸಂಘದ ಬಗ್ಗೆ ನಮಗೆ ಹೆಮ್ಮೆ ಇದೆ. ಡಿಕೆಶಿ ಜೊತೆ ಶಾಸಕರು ಇಲ್ಲ ಅಂತ ಅವರೇ ಒಪ್ಪಿಕೊಂಡಿದ್ದಾರೆ. ಹೈಕಮಾಂಡ್‌ನಿಂದ ಯಾರಿಗೆ ಚೀಟಿ ಬರುತ್ತೆ ಅವರು ಸಿಎಂ ಆಗುತ್ತಾರೆ. ಅದಕ್ಕಾಗಿಯೇ ಡಿಕೆಶಿ ಕೂಡ ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ಪದೇ ಪದೇ ಹೇಳುತ್ತಿದ್ದಾರೆ. ಅದಕ್ಕಾಗಿಯೇ ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ ನೋಡ್ತಾ ಇರಿ ಎಂದು ಭವಿಷ್ಯ ನುಡಿದರು.

Tags:
error: Content is protected !!