ಮೈಸೂರು: ರಸ್ತೆ ಅಗಲೀಕರಣಕ್ಕೆಂದು 40 ಮರಗಳನ್ನು ಕಡಿದು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 40 ಮರಗಳನ್ನು ಕಡಿದ ಇಂತಹ ನಗರದಲ್ಲಿ ದೊಡ್ಡವರ್ಯಾರು ಇಲ್ಲವೇ ಎಂದು ಪ್ರಶ್ನಿಸಿದ ಅವರು, ರಾಜಕಾರಣಿಗಳು ಹಾಗೂ ಮೈಸೂರು ಮಹಾರಾಣಿ ಏನು ಮಾಡುತ್ತಿದ್ದಾರೆ. ಮರಗಳ ಹನನ ಖಂಡಿಸಿ ಸ್ಥಳದಲ್ಲೇ ಮಹಾರಾಣಿ ಅವರು ಕೂರಬೇಕಿತ್ತು. ಅದನ್ನ ಬಿಟ್ಟು ಚಾಮರಾಜನಗರದಲ್ಲಿ ಜಾಗ ಬೇಕು ಎಂದು ಹೋಗಿದ್ದಾರೆ. ಅದು ಈ ಹಿಂದೆ ರಾಜರು ಕೊಟ್ಟಿರುವ ಜಾಗ. ಅದಕ್ಕೆ ತಾವೇ ಮುಂದೆ ನಿಂತು ಜಾಗದ ಹಕ್ಕು ಪತ್ರ ಕೊಡಲು ಹೇಳಬೇಕು. ಯಾರ್ ಯಾರು ಎಲ್ಲೆಲ್ಲಿ ಇದ್ದಾರೋ ಅದು ಅವರದ್ದೇ ಜಾಗ. ಈ ವಿಷಯದಲ್ಲಿ ಮಹಾರಾಣಿಯವರು ಜನರಿಗೆ ಆ ಜಾಗಗಳನ್ನು ಬಿಟ್ಟು ಕೊಡಬೇಕು ಎಂದು ಆಗ್ರಹಿಸಿದರು.





