Mysore
23
broken clouds

Social Media

ಮಂಗಳವಾರ, 02 ಜೂನ್ 2026
Light
Dark

ಇದೊಂದು ಸಮೀಕ್ಷೆ, ಜಾತಿಗಣತಿ ಅಲ್ಲ ಎಂದ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ

ugrappa caste census BJP

ಮೈಸೂರು: ಜಾತಿ ಗಣತಿ ವರದಿ ಅವೈಜ್ಞಾನಿಕ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಪ್ರತಿಕ್ರಿಯೆ ನೀಡಿದ್ದು, ಇದೊಂದು ಸಮೀಕ್ಷೆ, ಜಾತಿಗಣತಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮೈಸೂರಿನ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಮಿಷನ್ ಪ್ರಕಾರ ಸೆಕ್ಷನ್ 9 ಸಬ್ ಕ್ಲಾಸ್ 2ರ ಪ್ರಕಾರ ಜಾತಿಗಣತಿ ನಡೆಸುವ ಹಾಗೇ ಇಲ್ಲ. ಯಾರನ್ನ ಸೇರಿಸಬೇಕು ಯಾರನ್ನ ತೆಗೆಯಬೇಕು ಎಂದು ಒಂದು ಸಮೀಕ್ಷೆ ಮಾತ್ರ ಮಾಡಿದ್ದಾರೆ. ಆದ್ದರಿಂದ ಇದೊಂದು ಸಮೀಕ್ಷೆ. ಜಾತಿ ಜನಗಣತಿ ಅಲ್ಲ. ಅವಶ್ಯಕತೆ ಬಿದ್ದರೆ ಮೀಸಲಾತಿ ಪ್ರಮಾಣವನ್ನ ಹೆಚ್ಚಳ ಮಾಡುವ ದೃಷ್ಟಿಯಿಂದ ಗಣತಿ ಅವಶ್ಯಕತೆ ಇದೆ. ನಾನೇ ಇದುವರೆಗೆ ಸಂಪೂರ್ಣವಾಗಿ ಜಾತಿಗಣತಿ ವರದಿ ಓದಿಲ್ಲ.

ಇದನ್ನೂ ಓದಿ:- ಆರ್‌ಎಸ್‌ನವರೇ ಮೋದಿಯನ್ನು ತೆಗೆಯಬೇಕು ಎಂದುಕೊಂಡಿದ್ದಾರೆ: ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ

ಮೊದಲು ಈ ವಿಚಾರಕ್ಕೆ ಕೈ ಹಾಕಿದವರು ಸಿದ್ದರಾಮಯ್ಯನವರು ಬಳಿಕ ಬಿಹಾರ್‌ನಲ್ಲೂ ಶುರು ಮಾಡಿದರು. ದೇಶವಾರು ಜಾತಿ ಗಣತಿ ಆಗಬೇಕು ಎಂಬ ಒತ್ತಾಯ ಕೂಡ ಇದೆ.
ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ವೈಜ್ಞಾನಿಕವಾಗಿ ಚರ್ಚೆ ನಡೆಯುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಏನು ಮಾಡಬೇಕೆಂದು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಸೂಕ್ತ ನಿರ್ಧಾರ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ 95% ಸಮೀಕ್ಷೆ ಆಗಿದೆ ಎಂದು ಹೇಳುತ್ತಾರೆ ಎಂದರು.

ಇದನ್ನೂ ಓದಿ:- ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ನರೇಂದ್ರ ಮೋದಿ: ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ

ಇನ್ನು ಕೋಣನ‌ನ್ನು ನೀರಿಗೆ ತಳ್ಳಿ ಕೊಂಬನ್ನ ನೋಡಿ ವ್ಯಾಪಾರ ಮಾಡಿದಂತಾಗುತ್ತದೆ ಎಂದು ಗಾದೆ ಮಾತು ಹೇಳುವ ಮೂಲಕ ಜಾತಿ ಗಣತಿ ವರದಿ ಅಧ್ಯಯನ ಮಾಡದೇ ವಿರೋಧ ಮಾಡೋದು ಸರಿಯಲ್ಲ ಎಂದು ವಿರೋಧಿಗಳಿಗೆ ಟಾಂಗ್‌ ಕೊಟ್ಟರು.

Tags:
error: Content is protected !!