ಮೈಸೂರು: ಮುಡಾದಲ್ಲಿ ಟ್ರಾನ್ಸ್‌ಜೆಂಡರ್ಸ್‌ಗೆ ಸೈಟ್ ನೀಡಬೇಕು ಎಂದು ಟ್ರಾನ್ಸ್ ಜೆಂಡರ್ ರಶ್ಮಿಕಾ ಒತ್ತಾಯಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಎಲ್ಲಿಯೂ ಬಾಡಿಗೆ ಮನೆ ಸಿಗುತ್ತಿಲ್ಲ. ಮನೆ ಬಾಡಿಗೆ ಕೊಡಲು ಹಿಂದೇಟು ಹಾಕುತ್ತಾರೆ. ಎಲ್ಲರಂತೆ ನಾವು ಪ್ರತಿಷ್ಟಿತ ಬಡಾವಣೆಗಳಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಜನರಿಗೆ ಸೈಟ್ ನೀಡುವಂತೆ ನಮಗೂ ಮೂಡದಲ್ಲಿ ಸೈಟ್ ನೀಡಬೇಕು. ಎಲ್ಲರಂತೆ ನಾವು ಜೀವನ ನಡೆಸುತ್ತೇವೆ.
ನಮಗೆ ಯಾರು ಉದ್ಯೋಗ ನೀಡುತ್ತಿಲ್ಲ. ಸ್ವಂತ ಬ್ಯುಸಿನೆಸ್ ಪ್ರಾರಂಭಿಸಿದರೆ ಗ್ರಾಹಕರು ಯಾರು ಬರುವುದಿಲ್ಲ. ಹೋಟೆಲ್ ನಡೆಸಿದರೆ ನಮ್ಮ ಬಳಿ ಯಾರು ಬರುವುದಿಲ್ಲ.
ಬಸ್‌ನಲ್ಲಿ ನಮ್ಮ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಲು ಹಿಂಜರಿಯುತ್ತಾರೆ. ನಾವೆಲ್ಲ ಒಂದೇ ರೂಮ್‌ನಲ್ಲಿ ಬಹಳಷ್ಟು ಮಂದಿ ವಾಸಿಸುತ್ತೇವೆ. ಆದ್ದರಿಂದ ಮೂಡದಲ್ಲಿ ಟ್ರಾನ್ಸ್ ಜೆಂಡರ್ಸ್‌ಗೆ ಪ್ರತ್ಯೇಕವಾಗಿ ಸೈಟ್ ನೀಡಿ ಎಂದು ಆಗ್ರಹಿಸಿದರು.





