ಮೈಸೂರು: ನಾಳೆ ನಾಡಿನಾದ್ಯಂತ ಆಯುಧಪೂಜೆ ಸಂಭ್ರಮ ಮನೆಮಾಡಲಿರುವ ಹಿನ್ನೆಲೆಯಲ್ಲಿ ಇಂದು ಮಾಲೀಕರು ಅಂಗಡಿ-ಮುಂಗಟ್ಟುಗಳನ್ನು ಸ್ವಚ್ಛಗೊಳಿಸಿದ್ದಾರೆ.
ನಾಳೆ ಆಯುಧಪೂಜೆಯ ಸಡಗರ ಸಂಭ್ರಮ ಮನೆಮಾಡಲಿದ್ದು, ಎಲ್ಲಾ ಆಯುಧಗಳು ಸೇರಿದಂತೆ ವಾಹನಗಳು, ಅಂಗಡಿ-ಮುಂಗಟ್ಟುಗಳಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಇದನ್ನು ಓದಿ : ನಾಳೆ ಆಯುಧಪೂಜೆ ಸಂಭ್ರಮ: ಮೈಸೂರಿನಲ್ಲಿ ಹೂವು-ಹಣ್ಣು ಖರೀದಿ ಭರಾಟೆ ಜೋರು
ಈ ಹಿನ್ನೆಲೆಯಲ್ಲಿ ಇಂದು ಸಾರ್ವಜನಿಕರು ಹೂವು-ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಮಾಡುತ್ತಿದ್ದು, ಸಂಜೆಯ ವೇಳೆಗಂತೂ ಮೈಸೂರಿನ ಪ್ರಮುಖ ರಸ್ತೆಗಳು ಹಾಗೂ ದೇವರಾಜ ಮಾರುಕಟ್ಟೆಯಲ್ಲಿ ಕಾಲಿಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಆಯುಧಪೂಜೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಜನರು ಗ್ರಾಮಾಂತರ ಪ್ರದೇಶಗಳಿಂದಲೂ ನಗರಕ್ಕೆ ಬಂದಿದ್ದು, ಮೈಸೂರಿನಲ್ಲಿ ಜಗಜಂಗುಳಿ ಏರ್ಪಟ್ಟಿದೆ.





