Mysore
22
overcast clouds

Social Media

ಶನಿವಾರ, 16 ಮೇ 2026
Light
Dark

ನಾಳೆ,ನಾಡಿದ್ದು ಮೈಸೂರಿನ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ಮೈಸೂರು : ವಿ.ವಿ ಮೊಹಲ್ಲಾ ಉಪವಿಭಾಗ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸುವ ಕೆಲಸದ ನಿಮಿತ್ತ ಫೆ.6 ಮತ್ತು 7 ರಂದು ಬೆಳಿಗ್ಗೆ 10 ರಿಂದ ಸಂಜೆ 6ರ ವರೆಗೆ ಕೆಲವು ಸೂಚಿತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಫೆ.6 ರಂದು ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು :
ಹೆಬ್ಬಾಳ್ 11 ಕೆ.ವಿ. ವಿದ್ಯುತ್ ಮಾರ್ಗದ ವ್ಯಾಪ್ತಿಯಲ್ಲಿ ಬರುವ ಹೆಬ್ಬಾಳ್ ಮುಖ್ಯರಸ್ತೆ, ಒಂದನೇ ಹಂತ, ಬಸವನಗುಡಿ ಸರ್ಕಲ್, ಸುಬ್ರಮಣ್ಯನಗರ, ಲೋಕನಾಯಕನಗರ, ಲಿಂಗಯ್ಯನಕೆರೆ, ಹೆಬ್ಬಾಳ್ ಕ್ವಾರ್ಟಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಫೆ.7 ರಂದು ಒಂಟಿಕೊಪ್ಪಲು 11 ಕೆ.ವಿ. ವಿದ್ಯುತ್ ಮಾರ್ಗದ ವ್ಯಾಪ್ತಿಯಲ್ಲಿ ಬರುವ ವಿ.ವಿ ಮೊಹಲ್ಲಾ 4ನೇ ಮುಖ್ಯರಸ್ತೆ, 5ನೇ ಮುಖ್ಯರಸ್ತೆ, ಗೋಕುಲಂ ಮುಖ್ಯರಸ್ತೆ, ನಳಪಾಕ್ ಹೊಟೇಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿ.ವಿ.ಮೊಹಲ್ಲಾ ವಿಭಾಗದ ಚಾ.ವಿ.ಸ.ನಿ.ನಿ., ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:
error: Content is protected !!